ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆ ಹಿನ್ನೆಲೆ, ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಂಡೇ ಬಸಾಪುರ ತಾಂಡ(ಬಿಬಿ ತಾಂಡ)ದಲ್ಲಿ ನಡೆದಿದೆ.
ಗ್ರಾಮದ ಪಾಂಡುನಾಯ್ಕ (16) ಮೃತ ಬಾಲಕ. ಬಾಲಕ ಗುಡುಗು ಸಹಿತ ಮಳೆ ಶುರುವಾದ ಸಂದರ್ಭದಲ್ಲಿ ಮನೆಯ ಮೆಟ್ಟಿಲಿನ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಬಾಲಕನಿಂದ ಮಾರಳತೆ ಅಂತರದಲ್ಲಿದ್ದ ಮತ್ತೋರ್ವನಿಗೆ ಯಾವುದೇ ತೊಂದರೆಯಾಗಿಲ್ಲ, ಆದರೆ ಆತನ ಕಣ್ಣೆದುರೇ ಘಟನೆ ಜರುಗಿದ ಪರಿಣಾಮ ಅಘಾತಕ್ಕೀಡಾಗಿ ನಂತರ ಚೇತರಿಸಿಕೊಂಡಿದ್ದಾನೆಂದು ತಿಳಿದುಬಂದಿದೆ.
ಮೃತ ಬಾಲಕ ಪಾಂಡುನಾಯ್ಕ ಎಸ್‌ಎಸ್‌ಎಲ್‌ಸಿ ವ್ಯಾಸಾಂಗ ಮಾಡಿದ್ದು, ಇತ್ತೀಗಷ್ಟೇ ನಡೆದ ಪರೀಕ್ಷೆಗೆ ಹಾಜರಾಗಿ ಬರೆದಿದ್ದ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯನಗರ | ಕೃತಿಕಾ ಕೆ ಆರ್‌ಗೆ ಹಂಪಿ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪ್ರದಾನ