ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಹೊಸಪೇಟೆ ಘಟಕದ ಬಾಬಾ ಸಾಹೇಬ ಅಂಬೇಡ್ಕರ್ ಸಂಘಟನೆ ಕಾರ್ಯಕರ್ತರು ವಿಜಯನಗರ ಜಿಲ್ಲೆ ಹೊಸಪೇಟೆ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಹಿರಿಯ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ವರ್ಣಭೇದ ಮಾಡುವುದರ ಮೂಲಕ ದ್ರಾವಿಡರ ಅಸ್ಮಿತೆಯ ಬಣ್ಣವಾದ ಕಪ್ಪು ಬಣ್ಣವನ್ನು ಹಿಯ್ಯಾಳಿಸುವುದರ ಜೊತೆಗೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಸಂವಿಧಾನದಲ್ಲಿ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಾಂಗೀಯ ಆಧಾರದ ಮೇಲೆ ಮಾತನಾಡುವುದನ್ನು ನಿಷೇಧಿಸಿದೆ. ಆದರೂ ಮನುವಾದವನ್ನು ಹೊತ್ತಿರುವ ಆರಗ ಜ್ಞಾನೇಂದ್ರನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೆಳೆಹಾನಿ ಜಂಟಿ ಸಮೀಕ್ಷೆಗೆ ರೈತ ಸಂಘ ಒತ್ತಾಯ
ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ಟಿ ವಾಸುದೇವ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದ ಮನೆ, ಜೈ ಶಿವಕುಮಾರ್, ಪ್ರಗತಿಪರ ಸಂಘಟನೆಯ ಮುಖಂಡರುಗಳಾದ ದುರ್ಗಪ್ಪ ಪೂಜಾರ್, ತಮ್ಮನಳ್ಳೆಪ್ಪ ಡಿ ವೆಂಕಟರಮಣ, ಆಟೋ ರಾಮಚಂದ್ರ, ವೀರಭದ್ರ ನಾಯಕ, ಸಜ್ಜದ್ ಖಾನ್, ಮುದುಕಪ್ಪ, ನೀಲಕಂಠ, ಇಂತಿಯಾಜ್ ಓಬಳೇಶ್, ಹುಲುಗಣ್ಣ, ಗುಲಾಂ ರಸೂಲ್, ಕಾರಿಗನೂರು ರಾಮಕೃಷ್ಣ, ಚಲವಾದಿ ಮಹಾಸಭಾದ ಮುಖಂಡರಾದ ಜಿಕೆಟಿ ಕೊಟ್ರೇಶ್, ಸುನಿಲ್ ಕುಮಾರ್, ಕೂಡ್ಲಿಗಿ ಕೊಟ್ರೇಶ್, ಜಗದೀಶ್ ಸೇರಿದಂತೆ ಬಹುತೇಕರು ಇದ್ದರು.