ಮದುವೆ ಎಂದರೆ ಅಲ್ಲಿ ಆಡಂಬರ, ವೈಭವವಿರುತ್ತದೆ. ಆದರೆ, ಹೊಸಪೇಟೆಯ ಇಲ್ಲೊಂದು ಜೋಡಿ ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾಗುವ ಮೂಲಕ ಮಾದರಿಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಶಿವಕುಮಾರ್ ಹಾಗೂ ಸ್ವಾತಿಯವರ ವಿವಾಹ ಆಡಂಬರವಿಲ್ಲದೆ ಸರಳ ಹಾಗೂ ಅಂತರ್ಜಾತಿಯ ಸಂವಿಧಾನ ಸಾಕ್ಷಿ ವಿವಾಹ ನಗರದ ಚರ್ಚ್ ಹಾಲ್‌ನಲ್ಲಿ ಜರುಗಿತು.
ಹೊಸಪೇಟೆ ಶಿವಕುಮಾರ್ ಹಾಗೂ ತೆಲಂಗಾಣ ಮೂಲದ ಸ್ವಾತಿ ಇಬ್ಬರು ಪದವೀಧರರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬವನ್ನು ಒಪ್ಪಿಸಿ ಸರಳವಾಗಿ ಸಂವಿಧಾನ ಬದ್ಧವಾಗಿ ಸಬ್‌ರಜಿಸ್ಟರ್ ಕಛೇರಿಯಲ್ಲಿ ಮದುವೆ ನೊಂದಣಿ ಮಾಡಿಸಿ ಬಾಳ ಪೀಠಿಕೆ ಓದುವುದರ ಮೂಲಕ ಹೊಸ ಜೀವನಕ್ಕೆ ಹೆಜ್ಜೆ ಇಟ್ಟರು.
ವಧು-ವರ ಇಬ್ಬರೂ ಬೇರೆಬೇರೆ ಜಾತಿಯವರು. ಹುಡುಗಿ ಹಿಂದುಳಿದ ಜಾತಿಯವಳು ಹುಡುಗ ಪರಿಶಿಷ್ಟ ಜಾತಿಯವನು. ಪರಸ್ಪರ ಪ್ರೀತಿಸುತ್ತಿದ್ದರಿಂದ ಎರಡೂ ಕುಟುಂಬಗಳನ್ನು ಒಪ್ಪಿಸಿ ವಿಶ್ವಾಸಕ್ಕೆ ತೆಗೆದು ಕೊಂಡು ಮದುವೆಯಾದರು. ವಿಶೇಷವಾಗಿ ಗಂಡು ಹೆಣ್ಣಿನ ತಂದೆ-ತಾಯಿ ಪರಸ್ಪರ ಒಪ್ಪಿ ‘ನಮ್ಮ ಮಗಳನ್ನು ಶಿವಕುಮಾರ್‌ಗೆ ಕೊಟ್ಟಿರುತ್ತೇವೆ ಹಾಗೂ ನಮ್ಮ ಮಗನನ್ನ ಸ್ವಾತಿಗೆ ಕೊಟ್ಟು ಮದುವೆ ಮಾಡಿರುತ್ತೇವೆ’ ಎಂದು ಎರಡೂ ಕುಟುಂಬದ ತಂದೆ-ತಾಯಿಯವರು ಪರಸ್ಪರ ಹಾರವನ್ನು ಹಾಕಿ ವಿನಿಮಯ ಮಾಡಿಕೊಂಡರು.

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರೊ.ಟಿ.ಎಸ್.ಬಸವರಾಜ್ ಮಾತನಾಡಿ, “ಈ ದೇಶದಲ್ಲಿ ಜಾತಿ ತಾರತಮ್ಯ ಹೆಚ್ಚಾಗಿದೆ. ಬೇರೆ ಜಾತಿಯ ಗಂಡು ಹೆಣ್ಣು ಪರಸ್ಪರ ಪ್ರೀತಿಸಿ ಮದುವೆಯಾದರೆ ಮರ್ಯಾದಾ ಹತ್ಯೆಯಂತಹಾ ಘಟನೆಗಳು ಸಂಭವಿಸುತ್ತವೆ. ಆದರೆ, ಇಲ್ಲಿ ಇಬ್ಬರ ಕುಟುಂಬದವರೂ ಒಪ್ಪಿ ಮದುವೆ ಮಾಡುತ್ತಿದ್ದಾರೆ. ಇದು ಸಂತಸದ ವಿಚಾರ. ಇಂತಹ ಕುಟುಂಬಗಳ ಒಪ್ಪಿಗೆ ಮದುವೆ ಹೆಚ್ಚಾಗಬೇಕು. ಜಾತಿಯ ಭೇದ ಭಾವ ತೊಲಗಬೇಕು. ನಾವು ಜೊತೆಯಾಗಿ ಹೇಗೆ ಬದುಕುತ್ತೇವೆ. ನಮ್ಮ ಬದುಕಿನಲ್ಲಿ ತಪ್ಪು ಹೆಜ್ಜೆ ಇಟ್ಟಾಗ ತಿದ್ದುವ ಕೆಲಸ ಮಾಡುವುದಕ್ಕೆ ಎಲ್ಲರನ್ನೂ ಕರೆಸಿರುತ್ತಾರೆ. ಬದುಕಿನಲ್ಲಿ ಓಲೈಕೆಯಾಗಬಾರದು, ಹೊಂದಾಣಿಕೆ ಬಹಳ ಮುಖ್ಯ. ಈ ನೆಲ ಸಂವಿಧಾನಕ್ಕೆ ಒಳಪಟ್ಟು ಅಂತರ್ಜಾತಿ ವಿವಾಹವಾಗುತ್ತಿದ್ದಾರೆ. ಸಂವಿಧಾನವು ಯಾವ ಸಂಪ್ರದಾಯಕ್ಕೂ ಒಳಪಟ್ಟಿಲ್ಲ ಅಂತ ಸಂವಿಧಾನ ಸಾಕ್ಷಿ ಮದುವೆಯಾಗುತ್ತಿದ್ದಾರೆ” ಎಂದು ನೂತನ ದಂಪತಿಗೆ ಶುಭ ಹಾರೈಸಿದರು.
ವರ ಶಿವಕುಮಾರ್ ಮಾತನಾಡಿ, “ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಇಬ್ಬರಲ್ಲೂ ಒಪ್ಪಿಗೆ ಇತ್ತು. ಮದುವೆ ಆಗಬೇಕಾದರೆ ಇಬ್ಬರ ಕುಟುಂಬವನ್ನು ಪರಸ್ಪರ ಒಪ್ಪಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಸಾಕ್ಷಿಯಾಗಿಯೇ ಮದುವೆ ಆಗಬೇಕು. ಈ ಪುರೋಹಿತಶಾಹಿ ಆಚರಣೆಗಳನ್ನು ಧಿಕ್ಕರಿಸಬೇಕು ಎಂದು ನಿರ್ಧರಿಸಿದ್ದೆವು. ಸ್ವಾತಿಯವರ ಕುಟುಂಬವನ್ನೂ ಒಪ್ಪಿಸಿದೆವು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ; ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ: ಸಿಎಂ ಸಿದ್ದರಾಮಯ್ಯ
ವಧು ಸ್ವಾತಿ ಮಾತನಾಡಿ, “ನಮ್ಮ ಪ್ರೀತಿಗೆ ಮೊದಲು ಕುಟುಂಬದಿಂದ ವಿರೋಧ ವ್ಯಕ್ತವಾಯಿತಾದರೂ ನಂತರ ಒಪ್ಪಿಸಿದೆವು. ಸರಳವಾಗಿ, ಯಾವುದೇ ಅಡಂಬರ ಹಾಗೂ ವೈಭವವಿಲ್ಲದೆ ಮದುವೆ ಆಗಬೇಕು ನಾನು ಮತ್ತು ಶಿವಕುಮಾರ್ ನಿರ್ಣಯ ತೆಗೆದುಕೊಂಡೆವು. ಆ ಪ್ರಕಾರವಾಗಿ ನಾವು ಸಂವಿಧಾನ ಬದ್ಧವಾಗಿ ನಾವಿಂದು ಸಂಗಾತಿಗಳಾಗಿ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.
ವಿಶ್ಯಾಲ ಮ್ಯಾಸರ್, ಪೀರ್ ಭಾಷಾ, ಸಂತೋಷ ಬಡಿಗೇರ, ಖಾಸಿಮ್ ಅಲಿ, ಶರಣು, ಸರ್ದಾರ್, ಶರಣು ಕುಷ್ಟಗಿ, ವಧು-ವರನ ಕುಟುಂಬ ಹಾಗೂ ಮದುವೆಗೆ ಬಂದ ಹಿತೈಷಿಗಳೆಲ್ಲ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಅಂತರ್ಜಾತಿ ವಿವಾಹಿತರು ಜೀವನದಲ್ಲಿ ನೆಮ್ಮದಿಯಾಗಿರಲ್ಲ……
ಅವರು ಉದ್ದಾರವಾಗೋದೇ ಇಲ್ಲಾ…..
ಪ್ರತೀದಿನ ಅವರು ಬದುಕಿರೋವರೆವಿಗೂ ನರಕಯಾತನೆಯನ್ನು ಅನುಭವಿಸುತ್ತಾರೆ
ನವದಂಪತಿಗಳಿಗೆ ಶುಭಾಶಯಗಳು 💐
ಸಂವಿಧಾನ ಎಂಬ ಹೆಸರಿನಲ್ಲಿ ನಡೆಯುವ ಮದುವೆ
ಹಿಂದು ವಿರೋಧಿಗಳು, ಎಡಚರರು ತುರುಕರು
ಕಾಂಗಿಗಳು ಸೇರಿಕೊಂಡು ವಧು ವರರ ಮನಸಿನಲ್ಲಿ ವಿಷಬೀಜ ಬಿತ್ತಿ, ಈ ರೀತಿ ಮದುವೆ ಮಾಡುತ್ತಾ ವಿಕೃತಾನಂದ ಪಡೆಯುವ ಪರಮ ನೀಚರಲ್ಲದೇ ಬೇರೇನೂ ಅಲ್ಲ.
ಇದೇ ರೀತಿ ತುರುಕರ ಮತ್ತು ಕ್ರಿಶ್ಚಿಯನ್ನರ ಮದುವೆ ಮಾಡಿಸಲಾರರು. ಈ ನೀಚರು.
ಜೈ ಶಿವಾಜಿ ಜೈ ವಿವೇಕಾನಂದ ಜೈ ಭೀಮ್ ಜೈ ಹಿಂದ್