ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ʼಮಳೆ ಇಲ್ಲದ ಬೆಳೆಯಿಲ್ಲ, ಹೆಣ್ಣು ಇಲ್ಲದ ಮನೆಯಿಲ್ಲʼ ಎಂಬಂತೆ ಅರ್ಥಪೂರ್ಣವಾಗಿ ಹೆಣ್ಣನ್ನು ಸಮಾನವಾಗಿ ಗೌರವಿಸಿ ಅವರ ಹಕ್ಕುಗಳನ್ನು ಜಾಗೃತಿಗೊಳಿಸಿ ಶೋಷಣೆಗಳ ವಿರುದ್ಧ ಜಾಗೃತ ವಹಿಸಬೇಕಾಗಿದೆ ಎಂದು ಡಾ. ನಾಗರಾಜ್ ಹೇಳಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
“ಹೆಣ್ಣು ಭ್ರೂಣ ಹತ್ಯೆಗಳನ್ನು ನಿಷೇಧಿಸಬೇಕು. ಬಾಲ್ಯ ವಿವಾಹಗಳನ್ನು ತಡೆಗಟ್ಬೇಕು. ಹೆಣ್ಣುಮಕ್ಕಳ ಆರೋಗ್ಯದ ಸದೃಢತೆ ಬಗ್ಗೆ ಕ್ರಮ ವಹಿಸಬೇಕು. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಹೆಣ್ಣಿಗೆ ಅವಕಾಶ ಮಾಡಿಕೊಡಬೇಕು” ಎಂದು ಉಪನ್ಯಾಸ ಕೊಡುವುದರ ಮೂಲಕ ಪ್ಯಾರಾಮೆಡಿಕ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | 97 ಎಕರೆ ಭೂಮಿ ಕಬಳಿಕೆಗೆ ಯತ್ನ; ಪ್ರಭಾವಿ ರಾಜಕಾರಣಿಗಳ ಹುನ್ನಾರವೆಂದ ಎಚ್ ಡಿ ರೇವಣ್ಣ
ಮತ್ತೋರ್ವ ಅತಿಥಿ ಡಾ. ರೇಣುಕಾ ಮಾತನಾಡಿ, “ಹದಿಹರಯದವರು, ಕಿಶೋರಿಯರು ರಕ್ತಹೀನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅವರ ಆರೋಗ್ಯವನ್ನು ಸದೃಢವಾಗಿ ಕಾಪಾಡುವುದರ ಮೂಲಕ ಸಮಾಜದ ಉನ್ನತೀಕರಣಕ್ಕೆ ಅವಕಾಶ ಒದಗಿಸಬೇಕು. ಹೆಣ್ಣು ತನ್ನದೇ ಆದ ಸ್ಥಾನಮಾನದಿಂದ ಪ್ರಭಾವಿತಳಾಗಿದ್ದಾಳೆ. ಹಾಗಾಗಿ ಅವರನ್ನು ಗೌರವಿಸಿ ರಕ್ಷಿಸಬೇಕಾಗಿದೆ” ಎಂದು ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ರವಿಕುಮಾರ್ ಸರ್, ಡಾ. ರಮ್ಯ, ಡಾ. ಸುಮಂಗಳ, ಡಾ. ಅರ್ಪಿತ, ಜಗದೀಶ್ ಇದ್ದರು.