ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಪಿಟಿ ಶಿಕ್ಷಕರ ವಾರ್ಷಿಕ ವೇತನ ಬಾಕಿಯಿದ್ದು, ವೇತನ ಮತ್ತು ಬಡ್ತಿ ನೀಡುವಂತೆ ಆಗ್ರಹಿಸಿ ಅಧ್ಯಕ್ಷ ಯಂಕನಾಯ್ಕ ನೇತೃತ್ವದಲ್ಲಿ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗೌಡರಿಗೆ ಮನವಿ ಸಲ್ಲಿಸಿದರು.
“2023ರಲ್ಲಿ ನೇಮಕಗೊಂಡ ಜಿಪಿಟಿ ಶಿಕ್ಷಕರಿಗೆ ಮೂರರಿಂದ ನಾಲ್ಕು ತಿಂಗಳವರೆಗೆ ಬಾಕಿ ಉಳಿದಿರುವ ವೇತನ ಬಾಕಿಯನ್ನು ಆದಷ್ಟು ಬೇಗ ಒದಗಿಸಕೊಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತೇವೆ ಹಾಗೂ ಸರ್ಕಾರಿ ನಿಯಮಾವಳಿ ಪ್ರಕಾರ 2023ರಲ್ಲಿ ನೇಮಕಗೊಂಡ ಶಿಕ್ಷಕರಿಗೆ ವಾರ್ಷಿಕ ವೇತನ ಬಡ್ತಿ ಲಭಿಸಬೇಕಾಗಿರುತ್ತದೆ. ಆದರೆ ತಾಂತ್ರಿಕ ಕಾರಣಗಳಿಂದ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿರುವುದಿಲ್ಲ. ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು” ಎಂದು ಸಂಘದ ಅಧ್ಯಕ್ಷ ಯಂಕನಾಯ್ಕ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆಹಾರ ಇಲಾಖೆಯಲ್ಲಿ ಅವ್ಯವಹಾರ; ಸೂಕ್ತ ತನಿಖೆಗೆ ಕರವೇ ಆಗ್ರಹ
“ತಾಲೂಕು ಶಿಕ್ಷಣಾಧಿಕಾರಿ ಮಂಜುನಾಥ ಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.
ಮಾದೇಶ್ವರ ಕೆ ಇಸಿಒ ಮಿಟ್ಟನಾಯ್ಕ, ಸಿ ತಿರುಕನಗೌಡ, ಯು ಸಿ ಚನ್ನವೀರಪ್ಪ, ಟಿ ಕೆ ಪುಷ್ಪ, ಬೆಟ್ಟನಗೌಡ, ಯಶೋಧರ, ಮಹ್ಮದ್ ಆಸಿಫ್, ಚಂದ್ರಶೇಖರ ಎ, ಕೊಟ್ರೇಶ್, ಎನ್ ಪೂಜಾ, ಮಂಜುಶ್ರೀ, ಮಠದ ವಿರೇಶ ಮುಂತಾದವರು.