ಸಮಾಜದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳನ್ನು ವಿರೋಧಿಸಿ ವಿವಿಧ ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಜಯನಗರದ ಕೂಡ್ಲಿಗಿಯಲ್ಲಿ ಮೌನ ಜಾಗೃತಿ ಅಭಿಯಾನ ನಡೆಸಲಾಯಿತು.
ನಗರದ ವೀರ ಮದಕರಿ ವೃತ್ತದಲ್ಲಿ ಶನಿವಾರ ಸಂಜೆ ಕಪ್ಪು ಬಟ್ಟೆ ಧರಿಸಿ ಮೇಣದ ಬತ್ತಿಯ ಹಣತೆ ಬೆಳಗುವುದರ ಮೂಲಕ ನೂರಾರು ಮಹಿಳೆಯರು ಮತ್ತು ರೈತ ಮುಖಂಡರಿಂದ ಅರಿವಿನ ಜಾಥಾ ನಡೆಸಲಾಯಿತು. ಮಹಿಳಾಪರ ಸಂಘಟನೆಗಳು, ಸಂವಿಧಾನ ಜಾಗೃತ ಸಂಘಟನೆಗಳು, ಪ್ರಗತಿಪರರು ಕಳೆದ 12 ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಈ ಮೂಲಕ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಮಾರ್ಚ್ 7ರಂದು ನಡೆಯಲಿರುವ ಮಹಿಳಾ ವಿಚಾರ ಸಂಕಿರಣ ಕಾರ್ಯಕ್ರಮ ಮತ್ತು ಮಾರ್ಚ್ 8ರಂದು ಹೊಸಪೇಟೆಯಲ್ಲಿ ಸಮಾವೇಶ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, 5000ಕ್ಕೂ ಹೆಚ್ಚು ಮಹಿಳೆಯರು ಸೇರಲಿದ್ದಾರೆ. ಆ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರಗತಿಪರರು, ಮಹಿಳೆಯರು ಭಾಗಿಯಾಗಬೇಕೆಂದು ಈ ಜಾಥಾ ಮೂಲಕ ಮನವಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಎರಡು ಕಡೆ ಕುರಿ ಹಟ್ಟಿಗಳಿಗೆ ಬೆಂಕಿ; 55 ಮೇಕೆ, ಎರಡು ಟಗರು ಸಾವು
ಈ ವೇಳೆ ವಿವಿಧ ಸಂಘಟನೆಗಳ ಮಹಿಳೆಯರು, ರೈತ ಸಂಘದ ಮುಖಂಡರು ಸೇರಿದಂತೆ ಹಲವರು ಇದ್ದರು.
