ಕ್ರೀಡೆಗಳಿಗೆ ಆದ್ಯತೆ ನೀಡುವ ಸಲುವಾಗಿ ಕ್ರೀಡಾ ಅಕಾಡೆಮಿ ಆರಂಭವಾಗಬೇಕು ಎಂದು ಪ್ರೊ ಎಸ್ ಎಸ್ ಪಾಟೀಲ್ ಅಭಿಮತ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಜಿಬಿಆರ್ ಮಹಾವಿದ್ಯಾಲಯದ ಹಾನಗಲ್ ಕುಮಾರಸ್ವಾಮಿ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ದೈಹಿಕ ಶಿಕ್ಷಕರ ಸಂಘದ ವಾರ್ಷಿಕ ಕಾರ್ಯನಿರ್ವಹಣಾ ಸಭೆ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣದ ಶಾಲೆ ಮಕ್ಕಳು, ಕಾಲೇಜು ಯುವಜನರ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಕಾರ ಅಗತ್ಯ” ಎಂದರು.
ಅಯ್ಯನಗೌಡರ ಕೊಟ್ರಗೌಡ ಮಾತನಾಡಿ “ದೈಹಿಕ ಶಿಕ್ಷಕರು ಸವಲತ್ತು ಪಡೆಯಲು ಅನೇಕ ಹೋರಾಟ ನಡೆಸಿದರೂ ಫಲಪ್ರದವಾಗಿಲ್ಲ. ಎಲ್ ವೈದ್ಯನಾಥನ್ ವರದಿ ಈವರೆಗೂ ಜಾರಿಯಾಗದಿರುವುದರಿಂದ ದೈಹಿಕ ಶಿಕ್ಷಕರಿಗೆ ಹಿನ್ನಡೆ ಉಂಟಾಗಿದೆ. ಶಾಲೆಯ ಪರಿಸರ, ಶಿಸ್ತು ಕಾಪಾಡುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಜಿಲ್ಲಾ ದೈಹಿಕ ಅಧೀಕ್ಷಕ ಮಂಜುನಾಥ ಮಾತನಾಡಿ, “ಜಿಲ್ಲೆಯಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಆದರೆ ದೈಹಿಕ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಕ್ರೀಡೆಯಲ್ಲಿ ಸಾಧನೆಗೆ ಹಿನ್ನಡೆ ಉಂಟಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ವಿ ಬಿ ಜಗದೀಶ್, ಗಡ್ಡಿ ಶಿವಕುಮಾರ್, ಜಂಬಣ್ಣ, ಆರ್ ಪುರುಷೋತ್ತಮ, ಎಸ್ ಮುಸ್ತಫಾ, ಮಂಜುನಾಥ, ವಿ ಹನುಮಂತಪ್ಪ, ಜಿ ಎಂ ಕಾಂತೇಶ್, ಎಂ ಶಿವಲಿಂಗಪ್ಪ, ಎಂ ಶೇಖ್ ಅಹಮದ್, ದ್ವಾರಕೀಶ್ ರೆಡ್ಡಿ ಎಸ್, ಭರತ್ ಲಾಲ್ ಚೌವ್ಹಾಣ್ ಸೇರಿದಂತೆ ಇತರರು ಇದ್ದರು.