ಬಿಸಿಯೂಟಕ್ಕೆ ಬಳಸ ಬೇಕಿದ್ದ ಅಕ್ಕಿಯನ್ನು ಬಿಸಿಯೂಟದ ಅಡುಗೆ ಸಿಬ್ಬಂದಿ ಕಸದ ತೊಟ್ಟಿಗೆ ಸುರಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮಕ್ಕಳಿಗೆ ಆಹಾರವಾಗಿ ನೀಡಬೇಕಿದ್ದ 50 ಕೆಜಿಗೂ ಅಧಿಕ ಅಕ್ಕಿಯನ್ನು ಸಿಬ್ಬಂದಿ ಕಸದ ರಾಶಿಗೆ ಸುರಿದಿದ್ದಾರೆ ಎಂದು ಹೊಳಲು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಅಕ್ಕಿ ಮುಗ್ಗು ಬಂದದ್ದರಿಂದ, ಮಕ್ಕಳಿಗೆ ಯೋಗ್ಯವಲ್ಲ ಎಂದು ಸಿಬ್ಬಂದಿ ಅಕ್ಕಿಯನ್ನು ತೊಟ್ಟಿಗೆ ಸುರಿದಿದ್ದಾರೆ ಎಂದು ಮುಖ್ಯ ಶಿಕ್ಷಕ ಲಿಂಗಪ್ಪ ಸಮರ್ಥನೆ ನೀಡಿದ್ದಾರೆ.
ಅಕ್ಕಿ ಕೆಡುವವರೆಗೆ ಯಾಕೆ ಸಂಗ್ರಹಿಸಿದ್ದೀರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದು, ತಪ್ಪಿತರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.