ವಿಜಯಪುರ ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಮೈಬೂಬ ಸಾಹೇಬ.ವೈ.ಜೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನ ಸಮಿತಿಗೆ ವಿಜಯಪುರ ಜಿಲ್ಲೆಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಇವರ ಸಾಹಿತ್ಯಿಕ ಹಾಗೂ ಭಾಷೆಯ ಪರವಾದ ಕಾಳಜಿಯನ್ನು ಪರಿಗಣಿಸಿ ಅವರಿಗೆ ನೇಮಕ ಮಾಡಿದ್ದು,ಇವರು ಸರ್ಕಾರ ಮುಂದಿನ ಆದೇಶದವರೆಗೆ ಅಧಿಕಾರದಿಲ್ಲಿರುತ್ತಾರೆ ಎಂದು ವಿಜಯಪುರ ಜಿಲ್ಲೆಯ ಕ.ಅ.ಪ್ರಾ ಅಧ್ಯಕ್ಷರಾದ ದ್ರಾಕ್ಷಾಯಣಿ ಹುಡೇದ ಹಾಗೂ ರಾಜ್ಯ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಬೂಬ್ ಸಾಹೇಬ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪಿ ಎಚ್ ಡಿ ಮುಗಿಸಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಮುಗಿಸಿದ್ದಾರೆ.
