ವಿಜಯಪುರ | ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ‌ ಬಿದ್ದು ಯುವತಿ ಮೃತ್ಯು: ಐವರ ಬಂಧನ

Date:

Advertisements

ವಿಜಯಪುರ ನಗರದಲ್ಲಿ ಎರಡು ದಿನಗಳ ಹಿಂದೆ ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಕೆಳಗಡೆ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಯ ಕೊನೆ ಕ್ಷಣಗಳು ಮೊಬೈಲ್‌ ನಲ್ಲಿ ಸೆರೆಯಾಗಿದೆ. ಇದರ ದೃಶ್ಯಗಳು ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ.

ವಿಜಯಪುರದ ನವಭಾಗ್ ರಸ್ತೆಯಲ್ಲಿರುವ ಫಿಶ್ ಟನಲ್ ಎಕ್ಸ್ ‌ಪೋದಲ್ಲಿ ಅಕ್ಟೋಬರ್ 20ರ ಸಂಜೆ ಸಂಭವಿಸಿದ ಈ ಅವಘಡದಲ್ಲಿ ನಿಖಿತಾ ಅರವಿಂದ ಬಿರಾದಾರ (21) ಎಂಬ ಯುವತಿ ಮೃತಪಟ್ಟಿದ್ದರು.

Advertisements

ನಿಖಿತಾ ಹಾಗೂ ಮತ್ತಿಬ್ಬರು ಗೆಳೆಯತಿಯರು ಸೇರಿ ತಲೆ ಕೆಳಗಾಗಿ ತೂಗಾಡಿಸುವ ರೇಂಜರ್ ಸ್ವಿಂಗ್ ತೊಟ್ಟಿಲಿನಲ್ಲಿ ಕುಳಿತು ಆಟವಾಡುತ್ತಿದ್ದರು. ಇದೀಗ ಯುವತಿಯ ಪೋಷಕರ ಮೊಬೈಲ್‌ ನಲ್ಲಿ ಅಂದಿನ ಘಟನೆಯ ಕೊನೆ ಕ್ಷಣಗಳು ಸೆರೆಯಾಗಿರುವುದು ಬೆಳಕಿಗೆ ಬಂದಿದೆ.

1002120311

ತೊಟ್ಟಿಲಿನಲ್ಲಿ ಕುಳಿತಿದ್ದಾಗ ನಿಖಿತಾ ಅವರಿಗೆ ಹಾಕಿದ್ದ ಸೇಫ್ಟಿ ಬೆಲ್ಟ್ ಸಡಿಲಗೊಂಡಿದೆ. ಆಗ ತೊಟ್ಟಿಲು ತಲೆ ಕೆಳಗೆ, ಮೇಲೆ ಮಾಡಿ ತೂಗುತ್ತಿರುವವಾಗಲೇ ಭಯದಿಂದ ಚೀರಾಟ ಮಾಡಿದ್ದಾರೆ. ಈ ವೇಳೆ, ನಿಖಿತಾ ತಾಯಿ ಗೀತಾ ಕೂಡ ರೇಂಜರ್ ಸ್ವಿಂಗ್ ಯಂತ್ರ ನಿಲ್ಲಿಸುವಂತೆ ಆಪರೇಟರ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ಆದರೂ, ಯಂತ್ರವನ್ನು ಆಪರೇಟರ್ ನಿಲ್ಲಿಸಿಲ್ಲ. ಇದರಿಂದ ನಿಖಿತಾ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಫಿಶ್ ಟನಲ್ ಎಕ್ಸ್ಪೋಗೆ ಬಂದಿದ್ದ ಜನರು ಸಹ ಓಡಿ ಬಂದಿರುವ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿವೆ.

ಆದರೆ, ಕೆಳಗಡೆ ಬಿದ್ದ ರಭಸಕ್ಕೆ ನಿಖಿತಾ ಅವರ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿತ್ತು. ನಂತರದಲ್ಲಿ ಪೋಷಕರೇ ಆಟೋದಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ನಿಖಿತಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಳಪೆ ಸೇಫ್ಟಿ ಬೆಲ್ಟ್ ಕಾರಣದಿಂದಲೇ ಈ ದುರಂತ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ಸಂಬಂಧ ಫಿಶ್ ಟನಲ್ ಎಕ್ಸ್ಪೋ ಮ್ಯಾನೇಜರ್, ಆಪರೇಟರ್ಸ್ ಹಾಗೂ ಇತರರ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆಪರೇಟರ್ ಮತ್ತು ಕ್ಯಾಶಿಯರ್ ಸೇರಿದಂತೆ ಈವರೆಗೆ ಒಟ್ಟು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X