ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಅತ್ಯಂತ ಕ್ರಿಯಾಶೀಲರಾಗಿ ಛಾಯಾಚಿತ್ರ, ವರದಿಗಾರಿಕೆ, ವಿಡಿಯೊಗ್ರಫಿ ಮಾಡುವುದರ ಮೂಲಕ ವೃತ್ತಿಪರ ತರಬೇತಿ ಪಡೆದುಕೊಂಡರು.
ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳನ್ನು ಸೆರೆಹಿಡಿದು ವರದಿ ಮಾಡಿ, ಮಾಧ್ಯಮಕ್ಕೆ ಕಳುಹಿಸುವ ಮೂಲಕ ಅತ್ಯುತ್ತಮ ಕವರೇಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಧ್ವನಿ ವಿಶೇಷ ಸಂಚಿಕೆ ಪ್ರಕಟಿಸಿದರು. ಅಕ್ಕ ಟಿವಿ ಮೂಲಕ ಮೂರೂ ದಿನಗಳ ಕಾರ್ಯಕ್ರಮದ ಲೈವ್ ಕವರೇಜ್ ಮಾಡುತ್ತಿದ್ದಾರೆ. ಸಾಮಾಜಿಕ ಪಾಲತಾಣದಲ್ಲಿ ಯುವಜನೋತ್ಸವ ‘ಶಕ್ತಿ ಸಂಭ್ರಮʼದ ಸುದ್ದಿಗಳನ್ನು ಕ್ಷಣಕ್ಷಣಕ್ಕೂ ಎಲ್ಲೆಡೆ ತಲುಪಿಸುವಂತೆ ಮಾಡಿದ ಕೀರ್ತಿ ವಿದ್ಯಾರ್ಥಿನಿಯರಿಗೆ ಸಲ್ಲುತ್ತದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕುವೆಂಪು ಓದು ಕಮ್ಮಟ, ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿ: ಡಾ ಚನ್ನಪ್ಪ ಕಟ್ಟಿ
ಇದೇ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರು, ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ವಿವಿಧ ರೀತಿಯ ಪ್ರಾಯೋಗಿಕ ತರಬೇತಿ ನೀಡಿದರು.
ತಾಂತ್ರಿಕ ಸಹಾಯಕ ನೀಲಕಂಠ ಹೆಗಡಿ ಮತ್ತು ಸಂಜಯ್ ರಾಠೋಡ ವಿದ್ಯಾರ್ಥಿನಿಯರಿಗೆ ತಾಂತ್ರಿಕ ನೆರವು ನೀಡಿದರು.