ನಮ್ಮ ದೇಶ ಬಹುತ್ವವನ್ನು ಪ್ರತಿಪಾದಿಸುವಂತಹದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು, ವಿವಿಧ ಧರ್ಮ ಜಾತಿಯ ಭಾಷೆಯ ಜನಾಂಗದವರಿದ್ದೇವೆ ನಾವೆಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಏಕತೆಗಾಗಿ ನಡೆದ ಬೃಹತ್ ಸೌಹಾರ್ದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಸೌಹಾರ್ದ ಸಮನ್ವಯ ವೇದಿಕೆ ಆಶ್ರಯದಲ್ಲಿ ಈ ಮೌನ ಮೆರವಣಿಗೆ ಬಸವೇಶ್ವರ ಚೌಕದಿಂದ ಕಂಟ್ರಿ ಸರ್ಕಲ್ ವರೆಗೆ ನಡೆಯಿತು.
ಈ ಮೆರವಣಿಗೆಯಲ್ಲಿ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಮದ್ರಸಾ ಮತ್ತು ಶಾಲೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ರಾಷ್ಟ್ರಪರತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು.
ನಂದವಾಡಗಿ ಯಾ ಚಂದ್ರಮಹಾಸ್ವಾಮೀಜಿ ಮಾತನಾಡಿ, “ಪ್ರೀತಿ ಹಂಚುವುದು ಮತ್ತು ಹೃದಯಗಳನ್ನು ಬೆಸೆದುಕೊಳ್ಳುವುದು ಕಾಲದ ಅವಶ್ಯಕತೆ. ಶುದ್ಧ ಮನಸ್ಸು, ಉತ್ತಮ ನಡೆ ಸಮಾಜದಲ್ಲಿ ಶಾಂತಿಯನ್ನು ತಂದೊಡುತ್ತದೆ.” ಎಂದರು.
ಶರಣಪ್ಪ ಅಮದಿಹಾಳ್ ಮಾತನಾಡಿ, ದೇಶದ ಇತ್ತೀಚಿನ ಪರಿಸ್ಥಿತಿಗಳತ್ತ ಗಮನ ಸೆಳೆಯುತ್ತಾ, ಸಂವಿಧಾನಕ್ಕೆ ವ್ಯಕ್ತಪಡಿಸುತ್ತಿರುವ ದೊಡ್ಡ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ.ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರಾತಿಗೆ ಆಗ್ರಹ
ಕ್ರೈಸ್ತ ಸಮುದಾಯದ ಪ್ರತಿನಿಧಿ ಶ್ರೀ ಜಾನ್ ಬೆಟ್ಟರ್ ಅವರು ಧರ್ಮ, ಜಾತಿ, ಭಾಷೆ ಮೀರಿ ಸೌಹಾರ್ದತೆ, ಸಹಬಾಳ್ವೆ ಕುರಿತು ಮಾತನಾಡಿದರು.
ಈ ಮೆರವಣಿಗೆಯಲ್ಲಿ ಮೊಹಮ್ಮದ್ ಯೂನೂಸ್ ಮುದ್ದಗಲ್, ಸಿದ್ರಾ ಅಕಾಡೆಮಿ ವಿದ್ಯಾರ್ಥಿಗಳು, ಸ್ಥಳೀಯ ಶಾಲೆಗಳ ಶಿಕ್ಷಕರು, ಜನಾಬ್ ಅಬ್ದುಲ್ ರಝಕ ಟಟ್ಗಾರ್, ಜಮಾತ್ ಇಸ್ಲಾಮಿ ಹಿಂದ್ ಸ್ಥಾನಿಯ ಅದ್ದಕ್ಷರು ಹುಸೈನ್ ಭಾಷಾ, ಸುಳಿಬಾವಿ ಸಾಯೇದ್ ಕೂತವಾಲ್,ಡಾ. ಟಿಪ್ಪುಸುಲ್ತಾನ್ ಬಂಡಾರಿ, ಫಾರೂಕ್ ಉಮಾರಿ ,ಹಾಫೀಜ್ ಮೊಹಮ್ಮದ್, ಸೂಫಿಯನ್ ಸಖಾಫಿ,ಮೊಲಾನಾ ಫಾರೂಕ್ ಸಖಾಫಿ ಮತ್ತು ಸಾಮಾನ್ಯ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡರು.