ವಿಜಯಪುರ | ಪ್ರೀತಿಸಿ ಮದುವೆಯಾದ ಜೋಡಿ; ಯುವಕನ ಬಳಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟ ಯುವತಿ ತಾಯಿ

Date:

ವಿಜಯಪುರ ಜಿಲ್ಲೆಯಲ್ಲಿ ಪ್ರೇಮಿಗಳಿಬ್ಬರು ಮನೆಯವರು ಒಪ್ಪದ ಕಾರಣ, ಊರು ತೊರೆದು ಹೋಗಿ ಮದುವೆಯಾಗಿದ್ದರು. ಆದರೆ, ಇದೀಗ ಯುವತಿಯ ತಾಯಿ ತನಗೆ 50 ಲಕ್ಷ ಕೊಡಬೇಕು, ಇಲ್ಲವಾದಲ್ಲಿ ಯುವಕನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವ ದಂಪತಿಗಳು ರಕ್ಷಣೆಗಾಗಿ ಪೊಲೀಸರ ಮೊರೆಹೋಗಿದ್ದಾರೆ.

- Advertisement -

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂಡಿ ತಾಲೂಕಿನ ಹಂಜಗಿ ಗ್ರಾಮದ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್‌ಸಿ ಸಮುದಾಯದ ಅಶ್ವಿನಿ ಭಂಡಾರಿ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗೋ ಕನಸು ಕಂಡಿದ್ದರು. ಇವರ ಪ್ರೀತಿಯ ವಿಚಾರ  ಎರಡೂ ಮನೆಯವರಿಗೆ ಗೊತ್ತಾಗಿತ್ತು. ಮನೆಯವರು ಮದುವೆಗೆ ಒಪ್ಪದಿದ್ದಾಗ ಇಬ್ಬರೂ ಊರು ತೊರೆದು ಹೋಗಿ ಮದುವೆಯಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿ ಪ್ರದೇಶದ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ...

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ...

ಈಗ ಯುವತಿಯ ಮನೆಯವರು ಯಾಸೀನ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟರ ಮದ್ಯೆ ಅದೇ ಗ್ರಾಮದ ರೌಡಿ ಶೀಟರ್ ಹುಚ್ಚಪ್ಪ ಕಾಲೇಬಾಗ ಎಂಬಾತ, ನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಟ್ಟುಬಿಡು ನಿನ್ನ ಕೊಲೆ ಮಾಡಲ್ಲಾ ಎಂದು ನಂಬಿಸಿದ್ದಾನೆ. ಜೀವ ಭಯದಲ್ಲಿ ಯಾಸೀನ್ ಒಂದು ಲಕ್ಷ ರೂಪಾಯಿಯನ್ನು ಹುಚ್ಚಪ್ಪನಿಗೆ ನೀಡಿದ್ದಾನೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರೆ ಎಂದು ಯುವತಿ ಅಶ್ವಿನಿ ಆರೋಪ ಮಾಡಿದ್ದಾಳೆ.

ಈ ಮಧ್ಯೆ, ಯಾಸೀನ್ ನನ್ನು ಬಿಟ್ಟು ಬಾ ಬೇರೆ ಮದುವೆ ಮಾಡುತ್ತೇವೆಂದು ಒತ್ತಾಯ ಮುಂದುವರೆಸಿದ್ದು, 50 ಲಕ್ಷ ಹಣ ಬೇಕೆಂಬ ಬೇಡಿಕೆ ಇಟ್ಟಿದ್ದಾಳೆಂದು ಜೋಡಿ ಆರೋಪಿಸಿದೆ. ಯುವಕ ಯಾಸೀನ್ ಹಣವಿಲ್ಲ ಎಂದು ಹೇಳಿದಾಗ ಆತನ ತಂದೆ ತಾಯಿಯ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಸುಳ್ಳು ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ ಪ್ರೇಮಿಗಳು.

ಇದರಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ...

ಅ.23ರಂದು ‘ಊರೂರೂ ಜಂತರ್ ಮಂತರ್’ ಉಡುಪಿಯಲ್ಲೂ ಪ್ರತಿಭಟನೆ ಮತ್ತು ಜಾಥಾ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಮತದಾರರ...

ಉಡುಪಿಯಲ್ಲಿ ನವೀಕೃತ ಆಭರಣ ಜ್ಯುವೆಲ್ಲರ್ಸ್ ಮಳಿಗೆ ಅ. 21ರಂದು ಪುನರಾರಂಭ

ಉಡುಪಿ ನಗರದ ಸಿಬಿ ರಸ್ತೆಯಲ್ಲಿರುವ ಆಭರಣ ಜ್ಯುವೆಲ್ಲರ್ಸ್‌ನ ಮೂಲ ಮಳಿಗೆಯನ್ನು ಆಧುನಿಕ...

ಉಡುಪಿ | ಉಚ್ಚಿಲ ದಸರಾ ಶೋಭಾಯಾತ್ರೆ: ಅ. 21ರಂದು ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ-ಉಚ್ಚಿಲ ದಸರಾ 2026ರ ಅಂಗವಾಗಿ...