ರೈತರು ಕೇವಲ ಒಂದೇ ಬೆಳೆಯನ್ನು ಬೆಳೆಯದೆ, ಕೃಷಿ, ತೋಟಗಾರಿಕೆ ಬೆಳೆಗಳ ಜತೆಗೆ ಉಪಕಸಬುಗಳನ್ನೂ ಮಾಡಿ ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ಲಗಾದೇವಿ ದೇವಸ್ಥಾನದ ಒಣಬೇಸಾಯ ಯೋಜನೆಯಡಿಯಲ್ಲಿ ಸಮಗ್ರ ಕೃಷಿ ಪದ್ಧತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ರೈತರು ಇಂದು ಒಂದೇ ಬೆಳೆ ಬೆಳೆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿ ನಷ್ಟವಾಗುತ್ತದೆ. ಕಾರಣ ಕೃಷಿ ಜತೆಗೆ ಹೈನುಗಾರಿಕೆ, ಕುರಿ ಕೋಳಿ ಸಾಕಣೆ, ಜೇನು ಕೃಷಿ, ರೇಷ್ಮೆ ಕೃಷಿ ಮುಂತಾದ ಉಪಕಸಬುಗಳನ್ನು ಅಳವಡಿಸಿಕೊಂಡರೆ ಸಹಾಯವಾಗುತ್ತದೆ” ಎಂದರು.
ಮುಖ್ಯ ವಿಜ್ಞಾನಿ ಡಾ. ಎಂ ಪಿ ಪೋತದಾರ ಮಾತನಾಡಿ, “ರೈತರಿಗೆ ಅವರ ಅವಶ್ಯಕತೆಗನುಸಾರವಾಗಿ ಪೂರಕ ಪರಿಕರಗಳನ್ನು ಒದಗಿಸಿ, ಸಮಗ್ರ ಕೃಷಿ ಪರಿಕಲ್ಪನೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರ ಆದಾಯ ಹೆಚ್ಚಳಕ್ಕಾಗಿ ಕಳೆದ 6 ವರ್ಷಗಳಿಂದ ಒಣಬೇಸಾಯ ಯೋಜನೆಯಡಿ ರೈತರಿಗೆ ಸವಲತ್ತು ಸದುಪಯೋಗ ಪಡೆದುಕೊಳ್ಳಬೇಕು. ಬೆಳೆಯುವ ರೈತರಿಗೆ ಇದರ ಜತೆಯಲ್ಲಿ ಅಂತರ ಬೇಸಾಯ ಹಾಗೂ ವಿವಿಧ ಬೆಳೆ ಪದ್ಧತಿಗಳನ್ನು ಯೋಚನೆ, ಯೋಜನೆ ಮಾಡಿ ರೈತರೊಂದಿಗೆ ಚರ್ಚಿಸಿ, ಕಾರ್ಯಯೋಜನೆ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜೇನು ಕೃಷಿ ತರಬೇತಿ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ
ಈ ಸಂದರ್ಭದಲ್ಲಿ ಡಾ. ಎಸ್ ಎಂ ವಸ್ತ್ರದ, ಡಾ. ಎಸ್ ಎಸ್ ಕರಭಂಟನಾಳ ಹಿಂಗಾರಿ ಬೆಳೆಗಳಿಗೆ ತಗಲುವ ಪತೋಟ ಕ್ರಮಗಳ ಕುರಿತು ಮಾತನಾಡಿದರು. ಪಂಚಾಯಿತಿ ಅಧ್ಯಕ್ಷ ರೇಣುಕಾ ಸಿದ್ದಪ್ಪ ಹರಿಜನ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಅಶೋಕಗೌಡ, ಸುರೇಶಗೌಡ ಪಾಟೀಲ, ಸಂಗನಗೌಡ ಬಿದಾದಾರ, ಮಲ್ಲನಗೌಡ ಪಾಟೀಲ, ಮುತ್ತು ದೂಳಪ್ಪ ಸೊನ್ನ, ಹೊನ್ನೇಶ ಮುರಗೋಡ, ಸಂಗು ಬಬಲೇಶ್ವರ, ಮಲಗೀರೆಪ್ಪ, ಡಾ ಮಲ್ಲಿಕಾರ್ಜುನ ಗದ್ದನಕೇರಿ, ಆರ್ ಡಿ ಹಡಪದ, ಅನುರಾಧ ಕಗ್ಗೋಡ, ರೂಪಾ ಮುತ್ತಪ್ಪನವರ ಸೇರಿದಂತೆ ಇತರರು ಇದ್ದರು.