ಈ ದೇಶದಲ್ಲಿ ಸಾಮರಸ್ಯದಿಂದ ಬದುಕು ನಡೆಸಲು ಅವಕಾಶ ಕಲ್ಪಿಸಿ ಕೊಟ್ಟವರು ಡಾ. ಅಂಬೇಡ್ಕರ್ ಅವರು. ದೇಶದಲ್ಲಿ ಬೌದ್ಧ ಧರ್ಮ ಬೆಳವಣಿಗೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ವಿಜಯಪುರ ಜಿಲ್ಲೆಯ ನಡುಗುಂದಿ ಪಟ್ಟಣದ ಎಚ್‌ಪಿಎಸ್ ಶಾಲೆ ಆವರಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ, ಅಂಬೇಡ್ಕರ್ ರತ್ನ ಪ್ರಶಸ್ತಿ ವಿತರಣೆ, ಪ್ರತಿಭಾ ಪುರಸ್ಕಾರ, ತಾಲೂಕು ಛಲವಾದಿ ಮಹಾಸಭಾ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, “ಸಿದ್ದರಾಮಯ್ಯ 6,000 ಕೋಟಿ ಇದ್ದ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು 42 ಸಾವಿರ ಕೋಟಿಗೆ ಏರಿಕೆ ಮಾಡಿ ದಲಿತರ ಏಳಿಗೆಗೆ ಶ್ರಮಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ದಲಿತರಿಗೆ ಭೂಮಿ ಹಂಚಿಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ” ಎಂದರು.

ವಿಶ್ರಾಂತ ಉಪನ್ಯಾಸಕ ಎಚ್ ಟಿ ಕೋಟೆ ಮಾತನಾಡಿ, “ಶೇಕಡ 15ರಷ್ಟು ಮೀಸಲಾತಿ ಪಡೆದುಕೊಂಡ ಎಸ್‌ಸಿ ಎಸ್‌ಟಿ ಜನಾಂಗದವರು ಅಂಬೇಡ್ಕರ್ ಜಯಂತಿ ಮಾಡುತ್ತಾರೆ. ಆದರೆ ಶೇಕಡ 32ರಷ್ಟು ಮೀಸಲಾತಿ ಪಡೆದ ಜನಾಂಗದವರು ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ. ಅಂಬೇಡ್ಕರ್ ಅವರ ಚಿಂತನೆ ತತ್ವಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ನಿಸ್ವಾರ್ಥಗಳಾಗಬೇಕು” ಎಂದರು.
ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂಟು ಜೋಡಿ ದಂಪತಿ ನವಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ: ವಿಜಯಪುರ | ಮೇ 14ರಂದು ರಾಜ್ಯಮಟ್ಟದ ಜನ ಹೋರಾಟ
ಕಾರ್ಯಕ್ರಮದಲ್ಲಿ ಸುಜಾತ ಚಲವಾದಿ, ರಾಜು ಕೋಚಬಾಳ, ಎಚ್ ಎಚ್ ದೊಡ್ಡಮನಿ, ರುದ್ರಮುನಿ ಶಿವಾಚಾರ್ಯ, ಎಸ್ ಜಿ ನಾಗಠಾಣ, ಅಭಿಷೇಕ್ ಚಕ್ರವರ್ತಿ, ತಾಲೂಕು ಪಂಚಾಯತಿ ಇ ಓ ವೆಂಕಟೇಶ ಒಂದಾಲ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ವೀರೇಶ ಹಟ್ಟಿ, ಬಿಟಿ ಗೌಡರ, ಸಂಗಮೇಶ ಬಳೆಗಾರ, ಎಂ ಎಂ ಮುಲ್ಲಾ, ಶಾಮ್ ಪಾತ್ರದ, ಬೀಡಿ ಚಲುವಾದಿ, ಕುಮಾರ್ ಬಾಗೇವಾಡಿ, ಶೇಖರ್ ದೊಡಮನಿ, ಪ್ರಶಾಂತ ಚಲುವಾದಿ, ಸಿಂಧೂರ ಬೈರವಾಡಗಿ, ಚಂದ್ರಶೇಖರ ನುಗ್ಲಿ, ಬಸವರಾಜ ಹಾಲಕೊಪ್ಪಾರ, ಡಂಗ್ರಿ ಭಜಂತ್ರಿ, ಖಮೇಶ ಭಜಂತ್ರಿ, ಬಸವರಾಜ ನೀಡಗುಂದಿ, ಸಿಜಿ ವಿಜಯಕರ್ ಇದ್ದರು.