ವಿಶ್ವರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ವರ್ಷದ ಒಂದು ದಿನ ಅಷ್ಟೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಮಾತ್ರ ಅವರ ನೆನಪು ಆಶಯಗಳು ಸೀಮಿತವಾಗಬಾರದು. ಅವರ ನೆನಪು ಆಶಯಗಳು ಮತ್ತು ಮಾರ್ಗದರ್ಶನದ ಹಾದಿ ನಮ್ಮೆಲ್ಲರಲ್ಲಿ ಜೀವಂತವಾಗಿರಬೇಕು ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಡಾ. ಬಿ ಆರ್ ಅಂಬೇಡ್ಕರ್ ಅವರ ಇತಿಹಾಸ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಮೂಲಕ ಬದುಕುವ ಹಕ್ಕನ್ನು ನೀಡಿದ ಮಹಾತ್ಮ. ಅವರ ಮುಂದಿನ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಷ್ಟರಲ್ಲಿ ದೇವರನೆಂಬರಿಗಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ಭವ್ಯ ಪುತ್ಥಳಿ ನಿರ್ಮಾಣ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ದೇವರನಿಂಬರಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ ಮಾತನಾಡಿ, “ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಆದರ್ಶದ ಮಾರ್ಗದ ಆದಿಯಲ್ಲಿ ನಾವೆಲ್ಲರೂ ನಡೆಯೋಣ, ಸಂವಿಧಾನದ ಮಹತ್ವದ ಸದುದ್ದೇಶವನ್ನು ಇವತ್ತಿನ ಪೀಳಿಗೆಗೆ ಹೇಳಿಕೊಡುವ ಕೆಲಸವಾಗಬೇಕು. ಅಂಬೇಡ್ಕರ್ ಅವರ ವಿಚಾರಗಳನ್ನು ಮೂಲೆ ಮೂಲೆಗೆ ಕೊಂಡೊಯ್ಯುವ ಕೆಲಸವನ್ನು ನಿರಂತರವಾಗಿ ಇಂಥ ಜಯಂತಿಗಳ ಮೂಲಕ ಮಾಡೋಣ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಾತಿಗಣತಿ ವಿರುದ್ಧ ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ರ್‍ಯಾಲಿ
ಈ ವೇಳೆ ಸುರೇಶ ಗುಮಸ್ತೆ, ಪಿಂಟು ಮುತ್ತಿನ, ಡಿ. ಬಿ ಧರ್ಮವೀರ, ಮುತ್ತುಗೌಡ ಬಿರಾದಾರ, ಚಂದ್ರ ಬಾಬಾ ಸಿಂಗೆ, ದೇವಾನಂದ ಸಿಂಗೆ, ವಿಜಯಕುಮಾರ ಆವಲ್ದಾರ, ಬಸವರಾಜ ಲವಾಗಿ, ತಾನಾಜಿ ಶಿಂಗೆ, ಅಜಿತ ಸಿಂಗೆ, ಭೀಮ ಶಂಕರ ಕನ್ನೂರ, ಏಗಪ್ಪಗೌಡ ಬಿರಾದಾರ, ಅಲ್ಲಿಸಾಬ ಬೋರಾಗಿ, ಬೀರಪ್ಪ ಸಲಗರ, ಚನ್ನು ಗಾಡಿ ವಡ್ಡರ, ರಾಜಕುಮಾರ ಸಿಂಗೆ ಸೇರಿದಂತೆ ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಳಿ ಸರ್ವ ಸದಸ್ಯರು ಮತ್ತು ಸುತ್ತಮುತ್ತಲನ ಗ್ರಾಮಸ್ಥರು ಇದ್ದರು.