“ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದೆ. ಎಲ್ಲ ಸಮುದಾಯಗಳು ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲುವಿನ ವಿಶ್ವಾಸವಿದೆ” ಎಂದು ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.
ವಿಜಯಪುರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ವಿಜಯಪುರ ಮತಕ್ಷೇತ್ರದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
“ಕಾಂಗ್ರೆಸ್‌ಗೆ ಗೆಲುವಿನ ವಾತಾವರಣವಿದ್ದರೂ ಕೂಡ ಸವಾಲುಗಳು ಬಹಳಷ್ಟಿವೆ. ಹೋರಾಟ ದೊಡ್ಡದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದುವರಿಯಬೇಕಿದೆ. ನಾವು ಯಾವ ಧರ್ಮದ ವಿರೋಧಿಗಳಲ್ಲ. ನಾವೂ ಕೂಡ ಹಿಂದೂ ಧರ್ಮವನ್ನು ಗೌರವಿಸುತ್ತಿದ್ದೇವೆ. ಬಿಜೆಪಿ ಜನರಲ್ಲಿ ಕಾಂಗ್ರೆಸ್ ಬಗ್ಗೆ ತಪ್ಪು ಅಭಿಪ್ರಾಯ ಬಿಂಬಿಸುತ್ತಿದೆ. ಇದನ್ನು ತೊಡೆದು ಹಾಕಬೇಕಿದೆ” ಎಂದರು.
“ಸದ್ಯದ ಸಂಸದರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಎಂದೂ ಕ್ಷೇತ್ರದಲ್ಲಿ ತಿರುಗಿಲ್ಲ ಮತ್ತು ಲೋಕಸಭೆಯಲ್ಲೂ ಮಾತನಾಡಿಲ್ಲ. ಇವರದ್ದು ಶೂನ್ಯ ಸಾಧನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಸುದ್ದಿಗೋಷ್ಟಿಯಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ
ಸಭೆಯಲ್ಲಿ ಮುಖಂಡರುಗಳಾದ ಅಬ್ದುಲ್ ಹಮೀದ್ ಮುಶ್ರೀಫ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷೀ, ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಆರತಿ ಶಹಾಪುರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗಂಗಾಧರ ಸಂಬಣ್ಣಿ, ಡಿ ಎಚ್ ಕಲಾಲ್, ಆಜಾದ್ ಪಟೇಲ, ಚಾಂದ್ ಸಾಬ ಗಡಗಲಾವ್, ಮಹ್ಮದ್ ರಫೀಕ್ ಟಪಾಲ್, ಮಹಾದೇವ ಗೋಕಾಕ್, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಖಜಾಂಚಿ ವಿಜಯಕುಮಾರ್ ಘಾಟಗೆ, ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ್ ಜಹಾಗೀರದಾರ್, ವಸಂತ ಹೊನಮಾಡೆ, ಶರಣಪ್ಪ ಯಕ್ಕುಂಡಿ, ಅಶ್ಫಾಕ್ ಮನಗೂಳಿ, ಅಫ್ತಾಪ್ ಖಾದ್ರಿ ಇನಾಮದಾರ್, ಅಬ್ದುಲ್ ಪೀರಾ ಜಮಖಂಡಿ, ದೀಪಾ ಕುಂಬಾರ, ಭಾರತಿ ನಾವಿ, ಕಾಶಿಬಾಯಿ ಹಡಪದ, ಭಾರತಿ ಹೊಸಮನಿ, ಕೆಪಿಸಿಸಿ ಪದಾಧಿಕಾರಿಗಳು, ರಾಜ್ಯ ವಿವಿಧ ಅಂಗ ಘಟಕದ ಪದಾಧಿಕಾರಿಗಳು, ಪಕ್ಷದ ಮುಖಂಡರು, ಸಮಿತಿ ಪದಾಧಿಕಾರಿಗಳು, ಅಧ್ಯಕ್ಷರುಗಳು, ಮಹಾನಗರ ಪಾಲಿಕೆ ಸದಸ್ಯರು, ಹಲವು ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.