ದಲಿತ ನೌಕರರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಆಗ್ರಹಿಸಿ ದೌರ್ಜನ್ಯಕ್ಕೆ ಒಳಗಾದ ನೌಕರರ ಕುಟುಂಬಸ್ಥರು ಹಾಗೂ ಲೋಣಿ ಬಿಕೆ ಗ್ರಾಮದ ಮುಖಂಡರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಡಿವೈಎಸ್ಪಿ ಕಚೇರಿ ಮುಂದೆ ಧರಣಿ ನಡೆಸಿದರು.
ಲೋಣಿ ಬಿಕೆ ಗ್ರಾಮದ ಶಾಂತಿ ನೀಕೇತನ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಗವಾನ ಬುದ್ಧ ಬನಸೋಡೆ ಹಾಗೂ ರವೀಂದ್ರ ಕಾಂಬಳೆ ಎಂಬುವವರಿಗೆ ಅದೇ ಗ್ರಾಮದ ಗುರುಶಾಂತಪ್ಪ ಕಾಪಸೆ, ಬಾಪುರಾಯ ಲೋಣಿ ಹಾಗೂ ಇಬ್ಬರು ಸರ್ವೇಯರ್ ಸೇರಿಕೊಂಡು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದು, ಜೀವ ಬೇದರಿಕೆ ಕೂಡ ಹಾಕಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರೂ ಇಲ್ಲಿಯವರೆಗೆ ಪ್ರಕರಣ ದಾಖಲಿಸಿಕೊಂಡಿರುವುದಿಲ್ಲ. ಪ್ರಕರಣ ದಾಖಲಿಸುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಮನವಿಯಲ್ಲಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸೌಕತ್ ಅಲಿ ಸಜಾಗೀರದಾರ, ಪ್ರಕಾಶ ಝುಲಪಿ, ಶಿದಾನಂದ ಜಿತ್ತಿ, ಶ್ರೀಮಂತ ಝಲಪಿ, ಗುರುಬಸಪ್ಪ ಝಲಪಿ, ದಯಾನಂದ ಬಾಳಾಬಗಿ, ಮರೇಪ ಬನಸೋದೆ, ಖಾಜಪ ಬನಸೋದೆ, ಗುರುಸಿದ್ದ ಬನಸೋದೆ, ಗಜಪ್ಪ ಬನಸೋಣೆ, ಶೈಲ ಬನಸೋದೆ, ಶ್ರೀಶೈಲ ಉಟಗಿ, ಅಮಸಿದ್ದ ಝಲಪಿ, ಖಾಜಾಸಾಬ ಪಠಾಣ, ಚಾಂದ್ ಅತ್ತಾರ ಮೊದಲಾದವರು ಧರಣಿಯಲ್ಲಿ ಇದ್ದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ತೆಲಂಗಾಣ ರಾಜ್ಯಕ್ಕೆ ಕೃಷ್ಣಾ ನದಿ ನೀರು ಹರಿಸದಂತೆ ರೈತ ಸಂಘ ಮನವಿ
ಧರಣಿ ನಿರತ ಸ್ಥಳಕ್ಕೆ ಡಿವೈಎಸ್ಪಿ ಜಗದೀಶ ಭೇಟಿ ನೀಡಿ, ತಮ್ಮ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ತಾವು ಧರಣಿ ಕೈ ಬಿಡಬೇಕು ಎಂದು ತಿಳಿಸಿದರು. ಪ್ರಕರಣ ದಾಖಲಾಗುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಧರಣಿ ನಿರತರು ಪಟ್ಟು ಹಿಡಿದರು.
