ವಿಜಯಪುರ | ಬಾಬಾ ಸಾಹೇಬರು ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕ: ಕಲ್ಲಪ್ಪ ತೊರವಿ

Date:

Advertisements

ಡಾ. ಬಿ ಆರ್ ಅಂಬೇಡ್ಕರ್‌ ಕೇವಲ ದಲಿತರ, ಹಿಂದುಳಿದ ವರ್ಗದವರ ಮಾತ್ರವಲ್ಲ ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕರಾಗಿದ್ದರು ಎಂದು ವಿಜಯಪುರದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕಲ್ಲಪ್ಪ ತೊರವಿ ಹೇಳಿದರು.

ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಂಬೇಡ್ಕರರು ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆ ಬಗ್ಗೆ ಹೆಮ್ಮೆ ಮೂಡಿಸಿದ್ದಾರೆ. ರಚನೆಯಾಗಿ 73 ವರ್ಷ ಕಳೆದರೂ ಸಂವಿಧಾನದ ಮೂಲಸ್ವರೂಪ ತಿದ್ದುಪಡಿಗೊಳಗಾಗದೇ ಹಾಗೆಯೇ ಉಳಿದಿರುವುದು ನಮ್ಮ ದೇಶದಲ್ಲಿ ಮಾತ್ರ. ಇದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನದೃಷ್ಟಿ ಹೀಗಾಗಿಯೇ ಅಂಬೇಡ್ಕರ್‌‌ ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿ” ಎಂದರು.

ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಬಿ ಜಗ್ಗಿನವರ ಮಾತನಾಡಿ, “ಅಂಬೇಡ್ಕರ್ ಅವರು, ಹಿಂದುಳಿದ ವರ್ಗಗಳು, ದೀನದಲಿತರಗೆ ವಿಶೇಷ ಸವಲತ್ತುಗಳನ್ನು ನೀಡುವ ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲಾ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದ್ದಾರೆ” ಎಂದರು.

Advertisements

ಇದೇ ವೇಳೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ರಿಹಾನ ಮಲಿಕ್ ಹಳ್ಳೂರ, ಮಲ್ಲಿಕಾರ್ಜುನ ಕಾಮರೆಡ್ಡಿ ಹಾಗೂ ಅನಿತಾ ಜಾರ್ಜ್ ಅವರನ್ನು ಅಭಿನಂದಿಸಲಾಯಿತು.‌

ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ

ಕಾರ್ಯಕ್ರಮದಲ್ಲಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಡಾ. ಅಶೋಕ ಸಜ್ಜನ, ಡಾ. ಆರ್ ಬಿ ಜೊಳ್ಳಿ, ಡಾ ಎಸ್ ಎಂ ವಸ್ತ್ರದ, ಡಾ. ಎಂ ವೈ ತೆಗ್ಗಿ, ಡಾ. ಎಸ್ ಜಿ ಅಸ್ತಿ, ಡಾ. ರಮೇಶ ಬೀರಗೆ, ಡಾ. ಚಂದ್ರಕಾಂತ ಸೋರೆಗಾಂವಿ, ಡಾ. ಉಮರ್ ಪಾರುಕ್ ಮೋಮಿನ, ಡಾ.‌ ಎಸ್ ಎಸ್ ಕರಭಂಟನಾಳ, ಡಾ. ಬಸಮ್ಮ ಕುಂಬಾರ, ತುಕಾರಾಮ ಚಲವಾದಿ, ಮಹಾಂತೇಶ ಗೌಡರ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X