ವಿಜಯಪುರ ನಗರದಲ್ಲಿರುವ ವಿಶ್ವ ಗುರು ಬಸವಣ್ಣ ವೃತ್ತದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ವತಿಯಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆ ರಾಷ್ಟೀಯ ಬಸವದಳದ ಮುಖಂಡ ಡಾ. ರವಿ ಬಿರಾದಾರ ಮಾತನಾಡಿ, “ವಿಶ್ವ ವಿಖ್ಯಾತಿ ಪಡೆದ ಮಹಾತ್ಮ ಬಸವಣ್ಣನವರು ನಮ್ಮ ನಾಡಿನ ಮಣ್ಣಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಮತ್ತು ಸಮಾನ ತತ್ವದ ಪರಿಕಲ್ಪನೆಯೊಂದಿಗೆ ಅನುಭವ ಮಂಟಪ ಸ್ಥಾಪನೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅವರ ಕಾರ್ಯವನ್ನ ಸ್ಮರಿಸುವ ಉದ್ದೇಶದಿಂದ ಇವತ್ತಿನ ಸರ್ಕಾರ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಿರುವುದು ಯುವಪೀಳಿಗೆಗೆ ಸ್ಫೂರ್ತಿಯಾಗಬೇಕು” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, “ಬಸವಣ್ಣನವರ ವಚನಗಳು ನಮಗೆ ಆದರ್ಶವಾಗಬೇಕಾಗಿದೆ. ಇವತ್ತಿನ ಯುವಪೀಳಿಗೆಗೆ ಅವರ ತತ್ವಗಳು ಮತ್ತು ಆದರ್ಶ ವಿಚಾರಗಳನ್ನು ಕೋಮುವಾದಿ ಕಪಿಮುಷ್ಟಿಯಿಂದ ಹೊರ ತರಬೇಕಾಗಿದೆ. ವೈಚಾರಿಕ ವಿಚಾರವನ್ನು ಯುವ ಪೀಳಿಗೆ ಮೈಗೂಡಿಸಿಕೊಂಡು ಪ್ರಜ್ಞಾವಂತರಾಗಬೇಕಿದೆ” ಎಂದು ಕರೆ ನೀಡಿದರು.
ಇದನ್ನೂ ಓದಿ: ಗದಗ | ಬುದ್ಧಿಮಾಂದ್ಯ, ಅಂಗವಿಕಲರ ಆತ್ಮವಿಶ್ವಾಸಕ್ಕೆ ನೀರೆರೆದ ಮನರೇಗಾ
ಕಾರ್ಯಕ್ರಮದಲ್ಲಿ ಅಕ್ಷಯ ಅಜಮನಿ, ಮಾದೇಶ್ ಚಲವಾದಿ, ಶಂಕರ್ ಬಸರಗಿ, ದಾವೂದ್ ನಾಯ್ಕೋಡಿ, ಸಂದೇಶ್ ಕುಮುಟಗಿ, ಪ್ರಶಾಂತ್ ದಾಂಡೇಕರ್, ಪ್ರವೀಣ್ ಹಂಗರಗಿ, ಸಮೀರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.