ವಿಜಯಪುರ | ಪ್ರತಿಷ್ಠಿತ ವಲಯಗಳ ಹಿಂದೆ ಕಾರ್ಮಿಕರ ಶ್ರಮ, ತ್ಯಾಗವಿದೆ: ಮಲ್ಲಿಕಾರ್ಜುನ ಎಚ್ ಟಿ

Date:

Advertisements

ವಿಶ್ವದಾದ್ಯಂತ ರೈಲ್ವೆ, ಗಾಜು, ಬಟ್ಟೆ, ಹಳಿ ನಿರ್ಮಾಣ, ಗಣಿ ಸೇರಿದಂತೆ ಪ್ರತಿಷ್ಠಿತ ಕೈಗಾರಿಕಾ ವಲಯಗಳ ಹಿಂದೆ ಅನೇಕ ಕಾರ್ಮಿಕರ ಶ್ರಮ, ತ್ಯಾಗವಿದೆ ಅಂತಹವರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಹೇಳಿದರು.

ವಿಜಯಪುರ ನಗರದ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ವಿವಿಧ ಅಪಾಯಕಾರಿ ಕಾರ್ಖಾನೆಗಳಲ್ಲಿ ದಿನಕ್ಕೆ 14 ರಿಂದ 18 ಗಂಟೆಗಳವರೆಗೆ ಕಾರ್ಮಿಜನನಕರನ್ನು ದುಡಿಸಿಕೊಳ್ಳುವ ಮಾನವ ವಿರೋಧಿ ಪರಿಸ್ಥಿತಿ ಇತ್ತು. ಇದರ ವಿರುದ್ಧ ಅಮೆರಿಕ ದೇಶದ ಕಾರ್ಮಿಕ ಸಂಘಟನೆಗಳ ನಾಯಕರು ಸಮರ ಸಾರಿದರು. ದಿನಕ್ಕೆ 8 ಗಂಟೆಗಳ ಕೆಲಸದ ಬೇಡಿಕೆ ಇಟ್ಟರು. 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆ ಮನರಂಜನೆ ಎಂಬ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೂರಾರು ಜನ ನಾಯಕರು ತಮ್ಮ ಅಮೂಲ್ಯ ಪ್ರಾಣ ತ್ಯಾಗ ಮಾಡಿದರು. ಅವರನೆಲ್ಲ ನಾವಿಂದು ಸ್ಮರಿಸಬೇಕು” ಎಂದರು.

ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಬಿ ಭಗವಾನ ರೆಡ್ಡಿ ಮಾತನಾಡಿ, “ಇಂದಿನ ಬಂಡವಾಳಶಾಹಿಗಳು ಪುನಃ ಕಾರ್ಮಿಕ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿಯವರು ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳ್ತಾ ಇರೋದು ಆಧುನಿಕ ಜೀತ ಪದ್ಧತಿಯನ್ನು ಸೂಚಿಸುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿ ಖಂಡನೀಯ. ಇದರ ವಿರುದ್ಧ ಪ್ರಬಲ ಚಳವಳಿ ಕಟ್ಟಲು ಯುವಕರು ಮುಂದೆ ಬರಬೇಕೆಂದು” ಕರೆ ನೀಡಿದರು.

Advertisements

ಇದನ್ನೂ ಓದಿ: ವಿಜಯಪುರ | ಬಸವ ವೃತ್ತದಲ್ಲಿ ದವಿಪ ವತಿಯಿಂದ ʼಬಸವ ಜಯಂತಿʼ ಆಚರಣೆ

ಈ ವೇಳೆ ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಮಾದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಚಾಂದ ಶಶಿಕಲಾ ಮ್ಯಾಗೇರಿ, ಮಮದಾಪೂರ, ಆಲಮಟ್ಟಿ ಗಾರ್ಡನ್ ನೌಕರರು, ಬಿಸಿಯೂಟ-ವಸತಿ ನಿಲಯದ ಕಾರ್ಮಿಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X