ಎಲ್ಲ ವಿದ್ಯಾರ್ಥಿನಿಯರು ಸಸಿ ನೆಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಕೊಳ್ಳಿ. ಪರಿಸರ ಬೆಳವಣಿಗೆಯಲ್ಲಿ ಮತ್ತು ಅದರ ಪೋಷಣೆಯಲ್ಲಿ ಭಾಗಿಯಾದಾಗ ಆಗುವ ಆನಂದವೇ ಬೇರೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜೈವಿಕ ಮಾಹಿತಿ ಅಧ್ಯಯನ, ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗ ಹಾಗೂ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ವಿಜಯಪುರ ಚಾಪ್ಟರ್ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚಾರಣೆ’ಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸುತ್ತ, ವಿದ್ಯಾರ್ಥಿನಿಯರಲ್ಲಿ ಪರಿಸರದ ಮೇಲಿನ ಜವಾಬ್ದಾರಿಯ ನಂಬಿಕೆಯನ್ನು ಬಿತ್ತಿದರು. ವಿದ್ಯಾರ್ಥಿಗಳು ವಿವಿಧ ಆಯಾಮಗಳಲ್ಲಿ ಉದಾಹರಣೆಗೆ ನೀರು ಸಂರಕ್ಷಣೆ, ಕಸದ ವಿಂಗಡನೆ, ಹಸಿರು ಪರಿಸರ ನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಬೇಕು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ನೀಡಿದರು.
ಇದನ್ನೂ ಓದಿದ್ದೀರಾ? ಎಲೆಚಾಕನಹಳ್ಳಿಯಲ್ಲಿ ಪೊಲೀಸರಿಂದಲೇ ಅಸ್ಪೃಶ್ಯತೆ ಪೋಷಣೆ: ದಲಿತರು ಬದುಕುವುದು ಹೇಗೆ?
ಕಾರ್ಯಕ್ರಮದ ಸಂಯೋಜಕ ಡಾ. ಬಾಬು ಆರ್ ಎಲ್ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಎಲ್ಲ ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಪರಿಸರವನ್ನು ಸಂರಕ್ಷಿಸಲು ಪ್ರಮಾಣ ಮಾಡಿದರು.