ಅಂಬೇಡ್ಕರ್ 1900 ನವೆಂಬರ್ 7ರಂದು ಶಾಲೆಗೆ ಸೇರಿದ್ದರು. ಅವರು ಶಾಲೆಗೆ ಸೇರಿದ ದಿನವನ್ನು ‘ವಿದ್ಯಾರ್ಥಿ ದಿನ’ವೆಂದು ಆಚರಿಸಲು ಮಹರಾಷ್ಟ್ರ ಸರ್ಕಾರ ಆದೇಶಿಸಿದೆ. ಅಂತೆಯೇ ನಾವೂ ಕೂಡ ‘ವಿದ್ಯಾರ್ಥಿ ದಿನ’ ಆಚರಿಸುತ್ತಿದ್ದೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಮುಖಂಡ ವಿನೋದ ಕಾಳೆ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಡಿವಿಪಿ ಆಯೋಜಿಸಿದ್ದ ‘ವಿದ್ಯಾರ್ಥಿ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಅಂಬೇಡ್ಕರ್ ಶಾಲೆ ಸೇರಿ, ವಿದ್ಯೆಯಲ್ಲಿ ಮಹಾ ಸಾಧಕರಾಗಿ, ವಿಶ್ವ ಅರ್ಥಶಾಸ್ತ್ರಜ್ಞಾನರಾಗಿ, ಸಮಾಜ ವಿಜ್ಞಾನಿಯಾಗಿ, ಉತ್ತಮ ಇತಿಹಾಸತಜ್ಞರಾಗಿ, ಭಾರತ ಸಂವಿಧಾನ ಶಿಲ್ಪಿಯಾಗಿ ಭಾರತದ ಪ್ರಜಾಪ್ರಭುತ್ವ ಪಿತಾಮಹರಾಗಿ, ಸಾಮಾಜಿಕ ನ್ಯಾಯದ ಪ್ರತೀಕವಾಗಿ ಸಮಾನತೆಯ ಪ್ರಜಾತಂತ್ರ ವ್ಯವಸ್ಥೆಗೆ ಕಾರಣರಾಗಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಕಲಿತು ಅವರಂತೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿ ಪುರಸಭೆ ಮುಖ್ಯಧಿಕಾರಿಗಳು ಮಾಂತೇಶ ಹಂಗರಗಿ ಹಾಗೂ ಭೀಮಾಶಂಕರ ಮುರಮಾನ, ಭೀಮನಗೌಡ್ರು, ಕಲ್ಲಪ್ಪ ಅಂಜುಟಗಿ, ಮಿಲಿಂದ ಹೊಸಮನಿ, ವಿನೋದ ಕಾಳೆ, ರವಿಕುಮಾರ್ ಶಿಂಗೆ, ಆಕಾಶ ಹಾದಿಮನಿ, ಗಂಗಾಧರ್ ಕಾಳೆ, ಆಕಾಶ ಹೊಸಮನಿ, ಸುನಿಲ ಕಾಲೇಬಾಗ, ರಾಹುಲ ಮನಗೂಳಿ, ರಾಮ ಪೋತೆ, ರಾಹುಲ ಮಡ್ಡಿಮನಿ, ವಿಕಾಸ, ಶ್ರವಣ್, ಸೋನು, ರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.