ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ತತ್ವದ ಆಶಯಗಳನ್ನೇ ಮರೆತಿದ್ದಲ್ಲದೆ, ಸಹಕಾರ ಕ್ಷೇತ್ರದ ಮೇಲೆ ಲಕ್ಷ್ಯ ತೋರುತ್ತಿಲ್ಲ ಎಂದು ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ಅನ್ನಪೂರ್ಣ ಲೇಔಟ್‌ನಲ್ಲಿ ಮಂಗಳವಾರ ಸಂಜೆ ಸಿಂಧಗಿ-ಆಲಮೇಲ ದೇವರಹಿಪ್ಪರಗಿ ತಾಲೂಕಿನ ಪ್ರಾಥಮಿಕ ಕೃಷಿ ತ್ತಿನ ಅರ್ಬನ್ ಬ್ಯಾಂಕ್ ಹಾಗೂ ಕ್ರೆಡಿಟ್, ಸೌಹಾರ್ದ ಸಹಕಾರ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿರುವ ಸಹಕಾರ ವಸತಿ ಮತ್ತು ಮೂಲಭೂತ ನಿಗಮ ನಿಯಮಿತ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
“ಸಹಕಾರ ಚಳವಳಿಗೆ ನಾಂದಿ ಹಾಡಿದ ರಾಜ್ಯದಲ್ಲಿ ಹುಟ್ಟಿಬೆಳೆದ ಕ್ಷೇತ್ರ ಈಗ ಕ್ಷೀಣಿಸುತ್ತಿದೆ. ಸಹಕಾರ ರಂಗದಿಂದ ರಾಜ್ಯ ಅಭಿವೃದ್ಧಿ ಕಂಡಿದೆ. ಈ ತತ್ವದಿಂದ ರಾಜ್ಯವೇ ಸ್ವಾವಲಂಬಿಯಾಗಿ ಬೆಳೆದುನಿಂತಿದೆ” ಎಂದರು.

“ಎಲ್ಲ ಬೆಳೆಯನ್ನು ಬೆಳೆಯುವ ದೇಶ ನಮ್ಮದು. ಭವಿಷ್ಯದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿ, ಜಿಲ್ಲೆ ಸಂಪೂರ್ಣವಾಗಿ ನೀರಾವರಿಯಾಗುತ್ತದೆ. ಕೃಷಿ ಕುರಿತು ರೈತರಲ್ಲಿ ಅಸೂಯೆ ಮೂಡದಿರಲಿ. ವೈಜ್ಞಾನಿಕವಾಗಿ ಬೆಳೆಯುವ ಮೂಲಕ ತಮ್ಮ ಬದುಕನ್ನು ಬದಲಾವಣೆಗೆ ತೆರೆದುಕೊಳ್ಳಬೇಕು. ಸಹಕಾರ ತತ್ವದಡಿ ಸುಂದರ ಮತ್ತು ಸುಭದ್ರ ಬದುಕು ಕಟ್ಟಿಕೊಳ್ಳಬೇಕು. ಕಟ್ಟಡ ನಿರ್ಮಾಣಕ್ಕೆ ಕೈಲಾದ ಸಹಕಾರ ನೀಡಲಾಗುವುದು” ಎಂದು ಹೇಳಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, “ಮೂರು ತಾಲೂಕಿನ 362 ಸಹಕಾರ ಸಂಘಗಳು ತಮ್ಮ ಕಾರ್ಯ ಚಿಂತನ-ಮಂಥನ ಚಟುವಟಿಕೆಗಳು ಆಸರೆಯಿಲ್ಲದೇ ನಡೆದಿದ್ದವು. ಈ ಸಹಕಾರ ಭವನದ ಮೂಲಕ ಅವರ ಕೆಲಸಗಳಿಗೆ, ಸಭೆ-ಸಮಾರಂಭಗಳಿಗೆ ಅನುಕೂಲವಾಗಲಿದೆ. ಈ ಹಿಂದಿನ ಸಭೆಯಲ್ಲಿ ನಿರ್ಧರಿಸಿದಂತೆ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿವೆ. ಮುಂದಿನ ವರ್ಷ ಇದೇ ಫೆಬ್ರವರಿಯಲ್ಲಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೊಗರಿ ಬೆಳೆಹಾನಿ ಪರಿಹಾರಕ್ಕೆ ರೈತರ ಆಗ್ರಹ
ಸಾರಂಗಮಠ-ಗಚ್ಚಿನಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಾನ್ನಿಧ್ಯ ಅಖಂಡ ಸಹಕಾರ ಸಂಘಗಳ ಸಮಿತಿ ಅಧ್ಯಕ್ಷ ಡಾ. ರಾಮರಾವ್ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ, ಸಾಧಿಕ್ ಸುಂಬಡ, ಕೆಡಿಪಿ ಸದಸ್ಯೆ ಮಹಾನಂದ ಬಮ್ಮಣ್ಣಿ, ಇಚಿಡಿ ಸಹಕಾರಿ ಸಹಾಯಕ ಉಪನಿಬಂಧಕ ಕೆ ಎಚ್ ವಡ್ಡರ, ಶಿವಕುಮಾರ ಗುಂದಗಿ ಇದ್ದರು.