ಬೇರೆ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿರುವ ಚಡ್ಡಿ ಗ್ಯಾಂಗ್ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ ವಿಜಯಪುರಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಜಿಲ್ಲೆಯ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ವಿಜಯಪುರ ನಗರದಲ್ಲಿ ಬೀಡು ಬಿಟ್ಟಿರುವ ಚಡ್ಡಿ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಚಡ್ಡಿ ಧರಿಸಿ, ಮಾಸ್ಕ್ ಮತ್ತು ಮಫ್ಲರ್ ಹಾಕಿ ಗುಂಪುಗೂಡಿ ಕಳ್ಳತನಕ್ಕಿಳಿಯುವ ಈ ಗ್ಯಾಂಗ್ನ ಕೃತ್ಯಗಳು ನಗರದಲ್ಲಿರುವ ಸಿಸಿಟಿವಿಗಳಲ್ಲಿ ಸೆರೆಯಾಗಿವೆ.
ಪೊಲೀಸರು ಪೊಲೀಸ್ ಇಲಾಖೆಯು ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದು, ಚಡ್ಡಿ ಗ್ಯಾಂಗ್ ಪತ್ತೆಗೆ ವ್ಯಾಪಕ ಜಾಲ ಬೀಸಿದೆ. ಅಲ್ಲದೆ, ಆಟೋ, ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸುತ್ತಿದೆ. ಚಡ್ಡಿ ಗ್ಯಾಂಗ್ ಕಂಡುಬಂದರೆ ಮೊ. ಸಂ. 9480804200 ಅಥವಾ 112ಕ್ಕೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.