ವಿಜಯಪುರ | ಮಕ್ಕಳು ಆಟದ ಜತೆಗೆ ಓದಿಗೂ ಹೆಚ್ಚಿನ ಆಸಕ್ತಿ ತೋರಿಸಬೇಕು: ಹಮೀದ್ ಮುಶ್ರಫ್

Date:

Advertisements

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಹಾಗಾಗಿ ಮಕ್ಕಳು ಆಟದ ಜತೆಗೆ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ರಾಜಕೀಯ ಮುಖಂಡ ಹಮೀದ್ ಮುಶ್ರಫ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಜಯಪುರ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ನಗರದ ಬಾಲಕಿರಣ ಮಕ್ಕಳ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಲೊಯೋಲಾ ಪದವಿ ಪೂರ್ವ ಕಾಲೇಜು ವತಿಯಿಂದಿ “ನಮ್ಮ ಹಕ್ಕು ನಮ್ಮ ರಕ್ಷಣೆ” ಎಂಬ ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ಚಿಣ್ಣರ ಮೇಳ-2024 ಕಾರ್ಯಕ್ರಮದಲ್ಲಿ ಮಾತನಾಡಿದರು.

“ವಿಜಯಪುರ ಜಿಲ್ಲೆಯ ಮಕ್ಕಳು ಇವತ್ತು ಕ್ರಿಕೆಟರ್, ಪೈಲೆಟ್, ಆರ್ಮಿ ಹೀಗೆ ಉನ್ನತ ಹುದ್ದೆಯಲ್ಲಿದ್ದಾರೆ. ಜಿಲ್ಲೆಯ ಮಕ್ಕಳ ಎಲ್ಲ ಕ್ಷೇತ್ರಗಳಲ್ಲಿ ಇರುವಂತಾಗಬೇಕು. ಇದರಿಂದ ಪಾಲಕರು ಮತ್ತು ಜಿಲ್ಲೆಯ ಹೆಸರನ್ನು ಬೆಳಗುತ್ತೀರೆಂಬ ವಿಶ್ವಾಸವಿದೆ” ಎಂದು ಹೇಳಿದರು.

Advertisements

“ಇವತ್ತಿನ ಮಕ್ಕಳ ಮೇಳ ತುಂಬಾ ವಿಶೇಷತೆಯಿಂದ ಕೂಡಿದೆ. ನಿಮಗಾಗಿ ಸಂಸ್ಥೆ ಮನೋರಂಜನೆಯನ್ನು ಒದಗಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಬೇರೆ ಬೇರೆ ಕಡೆಗಳಿಂದ ಮಕ್ಕಳೆಲ್ಲ ಸೇರಿದ್ದೀರಿ. ಇಂದು ನಿಮ್ಮ ದಿನ. ಸಾಧ್ಯವಾದಷ್ಟು ಎಲ್ಲರೊಂದಿಗೆ ಬೆರೆತು ಸಂತೋಷಪಡಬೇಕು. ಜತೆಗೆ ಕಾರ್ಯಕ್ರಮದ ಅನುಭವವನ್ನೂ ಪಡೆದುಕೊಳ್ಳಬೇಕು” ಎಂದರು.

ಮುಖ್ಯ ಅತಿಥಿ ಬಸಮ್ಮ ಹತ್ತರಕಿ ಮಾತನಾಡಿ, ಸಂಕಷ್ಟದಲ್ಲಿರುವ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿ ಯಾವ ರೀತಿ ನೆರವು ನೀಡುತ್ತಿದೆ. ಅದನ್ನು ಹೇಗೆ ಸಂಪರ್ಕಿಸಬೇಕೆಂಬುವುದನ್ನು ಮಕ್ಕಳಿಗೆ ಮಾಹಿತಿ ನೀಡಿದರು. ಜತೆಗೆ ಮಕ್ಕಳ ಸಂರಕ್ಷಣೆಗೆ ಮಕ್ಕಳ ಕಲ್ಯಾಣ ಸಮಿತಿ ಸದಾ ಸಿದ್ಧವಾಗಿದೆಯೆಂದು ತಿಳಿಸಿದರು.

ಫಾದರ್ ಟಿಯೋಲ್ ಮಚಾದೊ ಮಾತನಾಡಿ, “ಇವತ್ತಿನ ಚಿಣ್ಣರ ಮೇಳದ ಮುಖ್ಯ ಉದ್ದೇಶ ಆಟದ ಜತೆಗೆ ಕೆಲವು ಕಲಿಕೆಯನ್ನು ಇವತ್ತು ನೀವು ಇಲ್ಲಿಂದ ಕಲಿಯಬೇಕಾಗಿದೆ. ಪರಸ್ಪರ ಅನುಭವವನ್ನು ಹಂಚಿಕೊಳ್ಳಿ, ಆಟವಾಡಿ, ಒಟ್ಟಿಗೆ ಕೂತು ಊಟಮಾಡಿ, ನೃತ್ಯಮಾಡಿ ಚಿಣ್ಣರ ಮೇಳವನ್ನು ಅನುಭವಿಸಿರಿ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | 11 ವರ್ಷದ ಬಾಲಕಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಯಶಸ್ವಿ

ಚಿಣ್ಣರ ಮೇಳದಲ್ಲಿ ಮಕ್ಕಳಿಗಾಗಿ ಕುದುರೆ ಸವಾರಿ, ಮೆಹಂದಿ, ವಿಜ್ಞಾನ ಪ್ರಯೋಗಾಲಯ, ಹೆಣ್ಣುಮಕ್ಕಳ ಮುಟ್ಟಿನ ಕುರಿತು ಮಾಹಿತಿ, ಆರೋಗ್ಯ ತಪಾಸಣೆ ಶಿಬಿರ, ಸಂವಿಧಾನದ ಮಾಹಿತಿ, ವಿವಿಧ ಬಗೆಯ ಆಟೋಟಗಳು, ಅಲ್ಪೋಪಹಾರ ಸ್ಟಾಲ್‌ಗಳು, ಮ್ಯಾಜಿಕ್ ಶೋ, ಸಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಮಕ್ಕಳು ಎಲ್ಲ ಬಗೆಯ ಚಟುವಟಿಕೆಯಲ್ಲಿ ಭಾಗವಹಿಸಿ ಸಂತೋಷಪಟ್ಟರು. ಕಾರ್ಯಕ್ರದಲ್ಲಿ ವಿವಿಧ ಸ್ಲಂಗಳಿಂದ 750 ಮಕ್ಕಳು ಚಿಣ್ಣರ ಮೇಳದಲ್ಲಿ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X