ವಿಜಯಪುರ | ಬಿಜೆಪಿ ಮುಖಂಡ ರವೀಂದ್ರ ಲೋಣಿ ಮಾತಿಗೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಿರುಗೇಟು

Date:

Advertisements

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ಶಾಸಕ ವಿಠಲ ಕಟಕ ದಂಡ ಅವರು ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಉಸ್ತುವಾರಿ ಸಚಿವರು ಸ್ಪಂದಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ನೀಡಿಲ್ಲವೆಂಬ ಬಿಜೆಪಿ ಮುಖಂಡ ರವೀಂದ್ರ ಲೋಣಿ ಆರೋಪ ಖಂಡನೀಯ ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ ಹೇಳಿದರು.

ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ಶಾಸಕರು ನಾಗಾಣ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಇಲಾಖೆಗಳಿಂದ 700 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ” ಎಂದು ಸಮರ್ಪಿಸಿಕೊಂಡರು.

“ಜಿಲ್ಲಾ ಉಸ್ತುವಾರಿ ಸಚಿವರು ನಾಗಠಾಣ ಕ್ಷೇತ್ರದ ಕೆಲಸ ಮಾಡಿಲ್ಲವೆಂಬ ಆರೋಪ ಖಂಡನೀಯ. ಇಡೀ ಜಿಲ್ಲೆಯನ್ನೇ ಅವರು ನೀರಾವರಿ ಮಾಡಿದ್ದಾರೆ. ಕೈಗಾರಿಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ಧದ ಟೀಕೆ ಸರಿಯಲ್ಲ” ಎಂದರು.

Advertisements

“ವಿಜಯಪುರ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹150 ಕೋಟಿ ವಿಶೇಷ ಅನುದಾನದಲ್ಲಿ ₹39 ಕೋಟಿ ಅನುದಾನ ನಾಗಠಾಣ ಕ್ಷೇತ್ರ ವ್ಯಾಪ್ತಿಗೆ ಬರುವ ಪಾಲಿಕೆ ವಾರ್ಡ್‌ಗಳಲ್ಲಿ ಖರ್ಚು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ನಾಯಕರೆಂದು ಹೇಳಿಕೊಂಡು, ಕೇವಲ ಅಲ್ಪಸಂಖ್ಯಾತ ಮುಸ್ಲಿಮರ ಪರ ಇದ್ದಾರೆಂಬ ಆರೋಪ ಖಂಡನೀಯ. ಸಿದ್ದರಾಮಯ್ಯನವರು ಸರ್ವಜಾತಿ, ಜನಾಂಗ, ಧರ್ಮಗಳ ಪರವಾಗಿದ್ದಾರೆ” ಎಂದರು.

“ನಾಗಠಾಣಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಅವರಂತಹ ಸಮರ್ಥ ನಾಯಕರು ಸಿಗದ ಕಾರಣ ಕ್ಷೇತ್ರ ಅಭಿವೃದ್ಧಿಯಾಗಿಲ್ಲವೆಂಬ ರವೀಂದ್ರ ಲೋಣಿ ಹೇಳಿಕೆ ಸರಿಯಲ್ಲ. ನಾಗಠಾಣವು ಈ ಮೊದಲು ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಿದ್ದಾಗ ಶಾಸಕ, ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವಧಿಯಲ್ಲಿ ಹಾಗೂ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಮೈತ್ರಿಕೂಟದ ಜೆಡಿಎಸ್ ಶಾಸಕರು ಇದ್ದಾಗ ಯಾವೆಲ್ಲ ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಬಿಜೆಪಿ ಮುಖಂಡರು ಕ್ಷೇತ್ರದ ಜನತೆಗೆ ತಿಳಿಸಬೇಕು” ಎಂದು ಸವಾಲು ಹಾಕಿದರು.

“ತಿಡಗುಂದಿ ಬಳಿ ಕೈಗಾರಿಕಾ ಸ್ಥಾಪಿಸುವುದು ಬೇಡವೆಂದು ಲೋಣಿಯವರು ವಿರೋದ ವ್ಯಕ್ತಪಡಿಸಿದ್ದಾರೆ. ಆದರೆ, ಆ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆದರೆ ಸಿಹಿ ನೀರು ಬದಲು, ಕಹಿ ನೀರು ಬರುತ್ತದೆ. ಇಂತಹ ಭೂಮಿ ಕೃಷಿಗಿಂತ ಕೈಗಾರಿಕೆಗೆ ಯೋಗ್ಯವಾಗಿದೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು” ಎಂದರು.

“ಶಾಸಕ ಬಸನಗೌಡ ಪಾಟೀಲ್ ಅವರು ಮುಸ್ಲಿಮರ ವಿರುದ್ಧ ನಿರಂತರ ವಾಗ್ದಾಳಿ, ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆಸಿದ ಲೋಣಿ, ಮುಸ್ಲಿಮರನ್ನು ಸದಾ ಕಾಲ ನಿಂದಿಸುತ್ತಿದ್ದರೆ ಶಾಸಕನಾಗಿರಬಹುದು ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಅವರ ಮುಸ್ಲಿಂ ವಿರೋಧಿ ಹೇಳಿಕೆ ಖಂಡನೆ” ಎಂದರು.

ಈ ಸುದ್ದಿ ಓದಿದ್ದೀರಾ? ಮೂರು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 6,635 ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲು: ಸಿಎಂ ಸಿದ್ದರಾಮಯ್ಯ

“2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಮತದಾರರು ಅವರಿಗೆ ಬುದ್ಧಿ ಕಲಿಸಿದ್ದರು. ಆದರೆ, ಹೊರಗಿನಿಂದ 25,000 ಅಕ್ರಮ ಮತದಾರರನ್ನು ಕರೆತಂದು, ಮತವನ್ನು ಕದ್ದು ಶಾಸಕರಾಗಿದ್ದಾರೆ” ಎಂದು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರ ಮಠ, ಶಹಜಾನ್ ಮುಲ್ಲಾ, ಆರ್ ಡಿ ಹಕ್ಕೆ, ಚಾಂದ್ ಸಾಬ್ ಗಡಗಲಾವ, ಸಲೀಂ ಪಿರಿಜಾದೆ, ಅಬ್ದುಲ್ ರಜಾಕ್ ಹೊರ್ತಿ, ರವಿ ದಾಸ ಕಾಲೆ ಭಾಗ, ಆನಂದ ಬಂಡಿ, ದೇಸಿ ಚೌಹಾಣ್, ವಸಂತ ವನ ಮೋಡೆ, ರಫೀಕ್ ಯಾತಗಿರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನ್ನಡ ಉಳಿಯಬೇಕಾದರೆ ಎಸ್‌ಇಪಿ ಜಾರಿಯಾಗಲಿ : ಪುರುಷೋತ್ತಮ ಬಿಳಿಮಲೆ

ʼಶಿಕ್ಷಣಕ್ಕೆ ಭದ್ರತೆ, ಜೀವನ, ಬದುಕು, ಅನ್ನ, ನೆಮ್ಮದಿ ಸೇರಿದಂತೆ ನಾನಾ ಅರ್ಥಗಳಿವೆ....

ರಾಯಚೂರು | ಬಾಣಂತಿ, ಮಗು ಸಾವು

ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ...

ಉಡುಪಿ | ಶಾಸಕರಿಂದ ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ, ಕಾನೂನು ಕ್ರಮ ಕೈಗೊಳ್ಳಿ – ಎಸ್ ಡಿ ಪಿ ಐ

ಮೈಸೂರು ಸಂಸ್ಥಾನದ ಇತಿಹಾಸದ ಗಂಧಗಾಳಿ ತಿಳಿಯದ ಮತ್ತು ಸದಾ ಹಿಂದುತ್ವದ ಅಮಲಿನಲ್ಲಿರುವ...

ವಿಜಯಪುರ | ಸರ್ಕಾರ ದಲಿತರಿಗೆ ರಾಜಕೀಯದಲ್ಲೂ ಮೀಸಲಾತಿ ಕಲ್ಪಿಸಲಿ: ದಸಂಸ ಸಂಚಾಲಕ ಮಯೂರ

ಪರಿಶಿಷ್ಟ ಸಮುದಾಯಗಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ...

Download Eedina App Android / iOS

X