ವಿಜಯಪುರ ನಗರದ ಸುತ್ತಮುತ್ತಲಿನಲ್ಲಿರುವ ರಸ್ತೆಗಳು ಹದಗೆಟ್ಟು ಹೋಗಿದ್ದು, ರಸ್ತೆಗಳ ಮಧ್ಯೆ ತಗ್ಗು ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ದಲಿತ ಮುಖಂಡರು, ಜನಪರ ಕಾಳಜಿಯುಳ್ಳ ಸಮಾನ ಮನಸ್ಕರು ಒಗ್ಗೂಡಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಳೆನೀರು ಸಂಗ್ರಹವಾಗಿರುವುದರಿಂದ ರಸ್ತೆ ಗುಂಡಿಗಳು ಕಾಣುತ್ತಿಲ್ಲ. ಬೈಕ್ ಸವಾರರು ರಸ್ತೆಗಳನ್ನು ನೋಡಿ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಕೋಟಿ ಕೋಟಿ ರೂಪಾಯಿಗಳಲ್ಲಿ ರಸ್ತೆ ಕಾಮಗಾರಿ ನಡೆದಿದ್ದರೂ ಮತ್ತೆ ರಸ್ತೆಗಳ ನಡುವೆ ಬಿದ್ದಿರುವ ಗುಂಡಿಗಳಿಗೆ ಜನರು ಭಯ ಭೀತರಾಗಿದ್ದರು.
ಸಂಬಂಧಿಸಿದ ಅಧಿಕಾರಿಗಳು, ಇಲಾಖೆಯವರು, ನಗರ ಶಾಸಕರು, ಮಹಾನಗರ ಪಾಲಿಕೆಯ ಆಯುಕ್ತರು ಕಂಡೂ ಕಾಣದಂತೆ ಜಾಣಕುರುಡು ಪ್ರದರ್ಶಿಸಿದ್ದಾರೆ. ಇಂತಹ ನಡೆ ನಮ್ಮ ನಗರದ ಅಭಿವೃದ್ಧಿಯ ಕಡೆ ಯಾರೂ ಗಮನ ಹರಿಸದಿರುವುದನ್ನು ಎತ್ತಿ ತೋರಿಸುತ್ತಿದೆ.

ವಿಜಯಪುರ ನಗರದಲ್ಲಿ ಗೋಲ್ ಗುಂಬಜ್ ಪೋಲಿಸ್ ಠಾಣೆ ಎದುರುಗಡೆ ರೈಲ್ವೆ ಸೇತುವೆ ಇರುವ ರಸ್ತೆಯಲ್ಲಿ ದೊಡ್ಡದಾದ ಗುಂಡಿ ಬಿದ್ದಿದ್ದು, ಬಹುದಿನಗಳಾದರೂ ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ. ಕೆಲಸದ ನಿಮಿತ್ಯ ದಲಿತ ಮುಖಂಡರು ಆ ಕಡೆ ಹೊದಾಗ ಅದನ್ನು ಗಮನಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.

ಜನಪರ ಹೊರಾಟದ ಜತೆಗೆ ಜನಪರ ಕಾಳಜಿಯು ಇರಲಿ ಎಂಬ ಮನದಾಸೆಯೊಂದಿಗೆ ಸಮಾಜದ ಎಲ್ಲ ಜನರ ಪರವಾಗಿ ನಾವು ಇದ್ದೇವೆ ಎಂಬ ಮನೋಭಾವ ಹೊಂದಿದ ಮುಖಂಡರು ರಸ್ತೆಯ ಗುಂಡಿ ಮುಚ್ಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ದಲಿತ ವಿರೋಧಿ ಹೇಳಿಕೆ ನೀಡಿರುವ ಜಿ ಟಿ ದೇವೆಗೌಡ ವಿರುದ್ಧ ಪ್ರತಿಭಟನೆ
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಯಮನಪ್ಪ ಗುಣಕಿ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಯಮನಪ್ಪ ಸಿದರಡ್ಡಿ,
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ, ಪಿಂಟು ನಾಟೀಕಾರ, ಸಿದ್ದು ಸೇರಿ ಐದು ಜನ ಮುಖಂಡರು ಭಾಗಿಯಾಗಿದ್ದರು.