ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಪೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆ (ಭೀಮವಾದ) ಕಾರ್ಯಕರ್ತರು ಆಗ್ರಹಿಸಿದರು.
ರಾಜಧಾನಿ ಬೆಂಗಳೂರಿನ ವಿಧಾನಸೌಧ ಎದುರು ಬಾಬಾಸಾಹೇಬರ ಪುತ್ಥಳಿ ಪ್ರತಿಷ್ಠಾಪಿಸಿರುವುದು ವಿಧಾನಸೌಧಕ್ಕೆ ಮೆರಗು ತಂದಿದೆ.
ಅದೇ ಮಾದರಿಯಲ್ಲಿ ಪಟ್ಟಣದ ಆಡಳಿತಸೌಧದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಮತ್ತು ತಹಸೀಲ್ದಾರ ಬಿ.ಎಸ್. ಕಡಕಬಾವಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಲ್ಲು ಮಡ್ಡಿಮನಿ, ವಿಕಾಸ ಗುಡಿಮನಿ, ಅಂಬಣ್ಣಾ ರಾಂಪೂರ, ಸಿದರಾಮ ಕೆಂಗಾರ, ಚನ್ನಪ್ಪ ನಡಗಡ್ಡಿ, ಚಂದಪ್ಪ ಸಿಗಣಾಪುರ, ಸಮರ್ಥ ಕೋಳೆಕರ, ಲಕ್ಷ್ಮಣ ಗುಂದವಾನ, ಸಂತೋಷ ಬೋವಿ, ಪ್ರಕಾಶ ಕಾಂಬಳೆ, ಈಶ್ವರ ಮನಗೂಳಿ, ನಾಗರಾಜ, ಬಾಬು ಪವಾರ ಮತ್ತಿತರಿದ್ದರು.
ಇದನ್ನೂ ಓದಿ: ವಿಜಯಪುರ | ʼಅರಿವೇ ಅಂಬೇಡ್ಕರʼ ವಿಶೇಷ ಸಂಚಿಕೆ ಲೋಕಾರ್ಪಣೆ