ವಿಜಯಪುರ | ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಲು ದೀಪಾಲಯ ಸಂಸ್ಥೆ ಕರೆ

Date:

Advertisements

ಪ್ರಜಾಪ್ರಭುತ್ವ ರಕ್ಷಿಸುವುದು, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಸಂವಿಧಾನಕ್ಕೆ ಮಾರಕವಾಗುತ್ತಿವೆ ಎಂದು ದೀಪಾಲಯ ಸಂಸ್ಥೆ ಹೇಳಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿವಶಕ್ತಿ ನಗರದಲ್ಲಿ ಎದ್ದೇಳು ಕರ್ನಾಟಕ ಹಾಗೂ ಈದಿನ.ಕಾಮ್ ಸಹಯೋಗದಲ್ಲಿ ದೀಪಾಲಯ ಸಂಸ್ಥೆ ಸಭೆ ನಡೆಸಿದೆ.

ಸಭೆಯಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕ ವಿಜಯಪುರ ಜಿಲ್ಲಾ ಕೋ ಆರ್ಡಿನೇಟರ್ ಅಬ್ದುಲ್ ಖದಿರ, “ಇವತ್ತಿನ ಈ ಸಭೆಯ ಮೂಲ ಉದ್ದೇಶ ಪ್ರಜಾಪ್ರಭುತ್ವ ರಕ್ಷಿಸುವುದು. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಸಂವಿಧಾನಕ್ಕೆ ಧಕ್ಕೆ ತರುವಂತಿವೆ. ಇಂತಹ ಸಮಯದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭತ್ವದ ರಕ್ಷಣೆಗಾಗಿ ಹೋರಾಟ ನಡೆಯಬೇಕಿದೆ” ಎಂದರು.

Advertisements

ನಮಗೆ ಇಷ್ಟವಾದ ಸರ್ಕಾರವನ್ನು ರಚಿಸುವ ಹಕ್ಕು ಸಂವಿಧಾನ ಕೊಟ್ಟಿದೆ. ಆ ಅಧಿಕಾರವನ್ನು ನಾವು ಬಳಸುತ್ತಿಲ್ಲ. ಅಧಿಕಾರ ಜನರಿಂದ ಬಂದಿದೆ. ಆದರೆ, ಶ್ರೀಮಂತರಿಗಾಗಿ ಸರ್ಕಾರ ನಡೆಸುತ್ತಿದೆ. ನಾವು ಕಷ್ಟಪಟ್ಟು ದುಡಿದುತ್ತಿರುವ ಹಣವು ಶ್ರೀಮಂತರ ಪಾಲಾಗುತ್ತಿರುವುದು ನೋವಿನ ಸಂಗತಿ ಎಂದರು.

ಜನಪ್ರತಿನಿಧಿಗಳು ಆಯ್ಕೆಯಾದ ನಂತರ ಹಲವು ಸಮಸ್ಯೆಗಳನ್ನು ನೋಡಿದರೂ ನೋಡದಂತೆಯೇ ಇದ್ದಾರೆ, ಉದಾಹರಣೆ ಬೆಲೆ ಏರಿಕೆ, ನಿರುದ್ಯೋಗ, ಬ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಈ ಯಾವ ಸಮಸ್ಯೆಗಳು ಕೂಡ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲ. ಕಂಡರೂ ಕೂಡ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಾಮಾನ್ಯ ಜನರ ಮಧ್ಯೆ ಧರ್ಮ- ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಹಾಗಿದ್ದರೆ ಇಂಥ ಸರ್ಕಾರ ಬೇಕಾ? ಇದರ ಬಗ್ಗೆ ಜನಗಳು ತೀರ್ಮಾನಿಸಬೇಕು. ಇಂಥ ಎಲ್ಲಾ ಸಮಸ್ಯೆಗಳ ವಿರುದ್ಧ ಜನರು ಒಂದಾಗಿ ಹೋರಾಟ ಮಾಡಲು ಅಣಿಯಾಗಬೇಕೆಂದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಭಾರತಿ ವಾಲಿ ಮಾತನಾಡಿ, ರಾಜ್ಯ ಸರ್ಕಾರವು ಬಡಜನರಿಗೆ ಬೇಕಾದಂತಹ ಐದು ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿವೆ. ಬಡ ಜನರಿಗೆ ತುಂಬಾ ಸಹಾಯಕರವಾಗಿವೆ. ಆದರೆ, ಬಿಜೆಪಿ ಸರ್ಕಾರವು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಹೀಗಳೆಯುತ್ತಿರುವದು ತುಂಬಾ ದುಃಖಕರ ಸಂಗತಿ ಎಂದರು.

ಕೇಂದ್ರದ ಸರ್ಕಾರದ ಘೋಷಣೆ ಮಾಡಿರುವ ಬೇಟಿ ಬಚಾವೋ ಬೇಟಿ ಪಡಾವೋ ಬರಿ ಬಾಯಲ್ಲೇ ಹೇಳುತ್ತಾರೆ ಅಷ್ಟೇ ಆದರೆ ವಾಸ್ತವ ಸ್ಥಿತಿ ಬೇರೇನೆ ಇದೆ. ನಾವು ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ, ಎಲ್ಲದರಲ್ಲೂ ಭಾಗವಹಿಸಬೇಕು, ಧೈರ್ಯವಾಗಿ ಮುನ್ನುಗ್ಗಬೇಕು, ನಮ್ಮ ಹಕ್ಕನ್ನು ಪ್ರತಿಪಾದಿಸಬೇಕು ಎಂದರು.

ದೀಪಾಲಯ ಸಂಸ್ಥೆ ಮುಖ್ಯಸ್ಥರು ಮಾತನಾಡಿ, ಸಂವಿಧಾನ ಸಾಮಾಜಿಕ ನ್ಯಾಯ ನಮಗೆ ಒದಗಿಸಿದೆ.ಹಿಂದು ಮುಸ್ಲಿಂ ಯಾವ ಭೇದವಿಲ್ಲದೆ ಎಲ್ಲರೂ ಒಳಗೊಂಡು ಈ ಸಭೆಗೆ ಹಾಜರಾಗಿದ್ದೇವೆ. ನಮ್ಮ ಸಂವಿಧಾನ ಹೇಳುವ ಹಾಗೆ ಸೋದರತೆ, ಬ್ರಾತೃತ್ವ, ಸಮಾನತೆಗಾಗಿ ನಾವು ಇಲ್ಲಿ ಎಲ್ಲರೂ ಸೇರಿದ್ದೇವೆ.

ಈಗಿನ ಕೇಂದ್ರ ಸರ್ಕಾರವು ಯಾವ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂತು, ಆ ಘೋಷಣೆಗಳು ಏನಾಗಿವೆ ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಉದಾಹರಣೆಗೆ ಕಪ್ಪು ಹಣ ಎಲ್ಲಿದೆ ನಮ್ಮ ಅಕೌಂಟಿಗೆ 15 ಲಕ್ಷ ಬಂತಾ? ಎರಡು ಕೋಟಿ ಉದ್ಯೋಗ ಕೊಟ್ಟಿದಾರೆಯೇ? ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಎದ್ದೇಳು ಕರ್ನಾಟಕ ಜಿಲ್ಲಾ ಮುಖಂಡರಾದ ಭುವನೇಶ್ವರಿ ಕಾಂಬಳೆ ಮಾತನಾಡಿ, ನಾವು ತಳ ಸಮುದಾಯವನ್ನು ಮುಟ್ಟುವ ಕೆಲಸ ಎದ್ದೇಳು ಕರ್ನಾಟಕದ್ದಾಗಿದೆ. ತಳ ಸಮುದಾಯದವರು ನಮಗೆ ರಾಜಕೀಯ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಅವರನ್ನು ರಾಜಕೀಯದಿಂದ ದೂರ ಇಡಲಾಗಿದೆ. ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಅತ್ಯಂತ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ದೇಶ ಭಾವೈಕ್ಯತೆಯಲ್ಲಿ ಏಕತೆಯನ್ನು ಹೊಂದಿರುವಂತಹ ದೇಶ. ಧಾರ್ಮಿಕ ಸಂಸ್ಕೃತಿಗೆ ಧಕ್ಕೆ ತರುವಂತ ಪಿತೂರಿಗಳು ಈಗಿನ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಇಂಡಿ ತಾಲೂಕು ಎದ್ದೇಳು ಕರ್ನಾಟಕ ಸಮಿತಿ ರಚನೆ ಮಾಡಲಾಯಿತು. ಇಂಡಿ ಎದ್ದೇಳು ಕರ್ನಾಟಕ ತಾಲೂಕು ಕೋ ಆರ್ಡಿನೇಟರ್ ಆಗಿ ಭಾರತಿ ವಾಲಿ ಸರ್ವಾನು ಮತದಿಂದ ಆಯ್ಕೆಯಾದರು. ಸದಸ್ಯರುಗಳಾದ ಜನಾಬಾಯಿ, ಶಬನ ಮುಲ್ಲಾ, ಗೀತಾ, ಸುರೇಖಾ ಕಟ್ಟಿಮನಿ, ಬಾಬುರಾವ್ ಗುಡಿಮನಿ, ಅಲ್ತಾಫ್ ಮುಲ್ಲಾ, ಅಷ್ಫಾಕ್ ಮುಲ್ಲಾ, ದೇವಕಿ ಕಟ್ಟಿಮನಿ, ರೇಣುಕಾ ನಾಟೆಕಾರ, ಶಾರದ ಮನಸಿ, ಭವಾನಿ ಬಿರಾದಾರ, ಸುರೇಖಾ ಬಬಲಾದಿ, ಮಹಾದೇವಿ, ಯಲ್ಲಬಾಯಿ ಬಬಲಾದಿ, ಭರತೇಶ್, ಬೈಜಾಬಾಯಿ ಹರಿಜನ, ಸಿಸ್ಟರ್ ರಿಯ, ರಾಜಶೇಖರ್ ಆಯ್ಕೆ ಮಾಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X