ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿರುವ ಭರವಸೆಗಳನ್ನು ತ್ವರಿತವಾಗಿ ಈಡೇರಿಸುವಂತೆ ಆಗ್ರಹಿಸಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“116 ದಿನಗಳ ಹೋರಾಟದ ಬಳಿಕ ಮುಖ್ಯಮಂತ್ರಿ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಘೋಷಿಸಿದ್ದರು. 2026-27ರ ಬಜೆಟ್‌ನಲ್ಲೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಡಿಪಿಆರ್ ಸಿದ್ಧಗೊಂಡಿದೆಯೇ ಅಥವಾ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ ಎಂಬ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ” ಎಂದು ಸಮಿತಿ ತಿಳಿಸಿದೆ.
ಡಿಪಿಆರ್ ಪ್ರತಿಯನ್ನು ಸಾರ್ವಜನಿಕರಿಗೆ ನೀಡಬೇಕು ಹಾಗೂ ವೈದ್ಯಕೀಯ ಕಾಲೇಜು ಆರಂಭಿಸಲು ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿತು. ಈ ಸಂದರ್ಭದಲ್ಲಿ ವೈದ್ಯಕೀಯ ಹೋರಾಟ ಸಮಿತಿಯ ಸದಸ್ಯರುಗಳಾದ ಅನಿಲ್ ಹೊಸಮನಿ, ಬಿ ಭಗವಾನ್ ರೆಡ್ಡಿ, ಚಂದ್ರಶೇಖರ್ ಲೆಂಡಿ, ಅಕ್ರಮ ಮಾಶಾಲ್ಕರ್, ಸುರೇಶ್ ಜೀಬಿ, ಮಲ್ಲಿಕಾರ್ಜುನ್ ಹಂದ್ರಾಳ, ಲಲಿತಾ ಬಿಜ್ಜರಗಿ, ಬಾಬುರಾವ್ ಬೀರಕಬ್ಬಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್. ಟಿ, ಶಿವಬಾಳಮ್ಮ ಕೊಂಡಗೂಳಿ, ಜಗದೇವ್ ಸೂರ್ಯವಂಶಿ, ಲಾಯಪ್ಪ ಇಂಗಳೆ, ಡಾ. ಗುರಿಕಾರ, ಭೀಮು ಉಪ್ಪಾರ, ಸಿದ್ರಾಮ್ ಹಿರೇಮಠ, ಭೋಗೇಶ್ ಸೋಲಾಪುರ್, ಬಾಳು ಜೇವೂರ್, ನೀಲಾಂಬಿಕಾ ಬಿರಾದಾರ, ಶ್ರೀನಾಥ್ ಪೂಜಾರಿ ಹಾಗೂ ಮತ್ತಿತರರಿದ್ದರು.





