ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನೀಗಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಾಲೂಕು ವೈದ್ಯಾಧಿಕಾರಿ ಎಸ್ ಟಿ ತಿವಾರಿಯವರಿಗೆ ಸೂಚಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಹೆರಿಗೆ ಕೋಣೆಗೆ ಹೋಗಿ ಹೆರಿಗೆಗೆ ಇರುವ ಸೌಲಭ್ಯಗಳ ಬಗ್ಗೆ ನರ್ಸ್ ಹಾಗೂ ವೈದ್ಯರಿಂದ ಮಾಹಿತಿ ಪಡೆದು, ಹೆರಿಗೆ ಕೊಠಡಿ ವೀಕ್ಷಿಸಿ, “ಇದೇನು ಹೆರಿಗೆ ಕೊಠಡಿಯೋ ಅಥವಾ ಸ್ಟೋರ್ ರೂಮ್ ಮಾಡಿಕೊಂಡಿದ್ದೀರೋ” ಎಂದು ಪ್ರಶ್ನಿಸಿದರು.
ಹೆರಿಗೆ ಮಾಡಲು ಬಳಸುವ ಉಪಕರಣಗಳು, ಮಗುವನ್ನು ಆರೈಕೆ ಮಾಡುವ ಬಗೆಗಿನ ಪ್ರಶ್ನೆಗಳಿಗೆ ನರ್ಸ್ ಸಮರ್ಪಕವಾಗಿ ಉತ್ತರಿಸಿದರು. ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರೈತರ ಬೆಳೆವಿಮೆ ಹಣ ಬಿಡುಗಡೆ ಮಾಡಿದರೆ ಬಿತ್ತನೆಗೆ ಆಸರೆಯಾಗುತ್ತದೆ: ಶರಣಬಸಪ್ಪ ಮಮಶೆಟ್ಟಿ
ಸರ್ಕಾರದ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಸೌಲಭ್ಯಗಳು ಸರಿಯಾಗಿ ಸಿಗುತ್ತಿರುವ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದು, ಆಹವಾಲು ಸ್ವೀಕರಿಸಿದರು. ಈ ವೇಳೆ ತಾಲೂಕು ವೈದ್ಯಾಧಿಕಾರಿ ಎಸ್ ಟಿ ತಿವಾರಿ, ಸಿ ಬಿ ವಿರಕ್ತ ಮಠ, ವೈ ಎಸ್ ತಳ್ಳೋಳ್ಳಿ, ಡಾ. ಕಾಶಿಬಾಯಿ ಪಾಟೀಲ, ಸಾಗರ್ ಪಾಟೀಲ, ರೇಷ್ಮಾಬಾನು ಹವೆಲಿ, ಡಿಎಸ್ಎಸ್ ಮುಖಂಡ ಮಲ್ಲು ತಳವಾರ, ಹನುಮಂತ ಕುರಿ, ವಿರೇಶ ಕಂದಗಲ್, ಕರವೇ ಮುಖಂಡ ರಫೀಕ್ ತೆಗ್ಗಿನಮನಿ ಇದ್ದರು.