ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್(ಡಿವಿಪಿ)ಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮ ಜಿಲ್ಲೆಯಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮವೆಂಬ ಹೆಗ್ಗಳಿಕೆಯಿದೆ. ಈ ಗ್ರಾಮ ತಾಲೂಕು ಅಥವಾ ಹೋಬಳಿಯಾಗುವಂತಹ ಎಲ್ಲ ಅರ್ಹತೆ ಹೊಂದಿರುವ ಗ್ರಾಮವಾಗಿದೆ” ಎಂದರು.
“ಗ್ರಾಮದಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಈ ಗ್ರಾಮಕ್ಕೆ ಒಂದು ಪ್ರೌಢಶಾಲೆ ಇಲ್ಲದಿರುವುದು ಈ ಭಾಗದ ದುರ್ದೈವ ಇದಾಗಿದೆ. ಕಲಕೇರಿ ಗ್ರಾಮದ ಸುತ್ತ ಇರುವ 40 ಹಳ್ಳಿಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪ್ರತಿದಿನ ದೂರದ ಊರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
“ಜಿಲ್ಲೆಯ ಗಡಿಭಾಗದ ಕಲಕೇರಿ ಗ್ರಾಮಕ್ಕೆ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅನುಕೂಲವಾಗುವ ಸಲುವಾಗಿ ಕಲಕೇರಿ ಗ್ರಾಮಕ್ಕೆ ನೂತನ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಾವೂದ್ ಮುಲ್ಲಾ, ಅಕ್ಷಯ್, ಪಂಡಿತ್ ಕರ್ನಾಳ, ವಿಶಾಲ್, ಯುರಾಜ್ ಓಲೇಕಾರ್, ಮಾದೇಶ ಸೇರಿದಂತೆ ಇತರು ಇದ್ದರು.