ಶಿಕ್ಷಣವು ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗದೆ, ಅಗತ್ಯ ಕೌಶಲ್ಯಗಳನ್ನೂ ಒಳಗೊಂಡಿದೆ ಎಂದು ಶಿಕ್ಷಣತಜ್ಞ ಎ ಎಚ್ ಸಾಗರ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ವೃತ್ತಿ ಸಮಾಲೋಚನಾ ಕೋಶ ಹಾಗೂ ಅಂತರಿಕ ಗುಣಮಟ್ಟ ಭರವಸೆ ಕೋಶ ಇವರ ಸಹಯೋಗದಲ್ಲಿ ಒಂದು ದಿನದ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾರ್ಕಿಕತೆ, ಸಾಫ್ಟ್‌ಸ್ಕಿಲ್ ಮತ್ತು ಇತರ ಅಗತ್ಯ ಕೌಶಲ್ಯಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“21ನೇ ಶತಮಾನವು ತಂತ್ರಜ್ಞಾನ ಮತ್ತು ನವೀನತೆಯ ಕಾಲವಾಗಿದೆ. ಇತ್ತೀಚಿನ ತಂತ್ರಜ್ಞಾನವು ಡಿಜಿಟಲ್ ಪ್ರಪಂಚವನ್ನು ಇನ್ನಷ್ಟು ಬದಲಾಯಿಸುತ್ತಿದೆ. ಇಂಥದರಲ್ಲಿ, ಕಂಪ್ಯೂಟರ್ ಮತ್ತು ಬ್ರೈನ್ ಇಂಟರ್ಫೇಸ್‌ಗಳನ್ನು ಬಳಸುವ ಮೂಲಕ, ಮಾನವ ಮತ್ತು ಯಂತ್ರದ ನಡುವಿನ ಸಂವಹನವನ್ನು ಸುಲಭಗೊಳಿಸಲು ಸಾಕಷ್ಟು ಹೊಸ ಅವಕಾಶಗಳು ಬಂದಿವೆ. ಈ ಹೊಸದಾದ ಪ್ರವರ್ತನೆಗಳ ಬಗ್ಗೆ ಸಾಫ್ಟ್‌ಸ್ಕಿಲ್ ಸಮುದಾಯ ನಿರ್ವಹಣೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದ.ಕ | ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು; ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ, ನಿರ್ವಾಹಕ
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಶಸ್ವಿಯಾಗಲು, ಕೇವಲ ವಿಷಯ ತಿಳಿದರೆ ಸಾಕಾಗುವುದಿಲ್ಲ. ಬದಲಾಗಿ ಸಮಾನಾಂತರ ಕೌಶಲ್ಯ ಒದಗಿಸುತ್ತಿರುವ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯವಾಗಿದೆ” ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್ ಎಂ ಚಂದ್ರಶೇಖರ, ಐಕ್ಯುಎಸಿ ನಿರ್ದೇಶಕ ಪ್ರೊ ಪಿ ಜಿ ತಡಸದ ಹಾಗೂ ಡಾ ಪಾಯ್ ಹೊಸಕೇರಿ ಇದ್ದರು.
