ಪೀರ ಗಾಲಿಬಸಾಹೇಬ ದರ್ಗಾಕ್ಕೆ ಎಲ್ಲರೂ ಭಕ್ತಿಯಿಂದ ಆರಾಧಿಸುತ್ತ ಬಂದಿದ್ದು, ಸದ್ಯ ದರ್ಗಾಕ್ಕೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ. ರಸ್ತೆ ಸಂಪೂರ್ಣವಾಗಿ ಅತಿಕ್ರಮಣಗೊಂಡು ಬಂದ್ ಆಗಿದೆ. ಅದರ ಬದಲು ಅಂಜುಮನ್ ಜಾಗದಲ್ಲಿ ತಾತ್ಕಾಲಿಕವಾಗಿ ಹಾದು ಹೋಗಬೇಕಾಗಿದೆ. ಅಲ್ಲಿ ಕಿರಿದಾದ ರಸ್ತೆ ಇದ್ದು, ಎರಡೂ ಬದಿಗಳಲ್ಲಿ ಮಾಂಸದ ಅಂಗಡಿಗಳಿವೆ. ಇದರಿಂದ ದರ್ಗಾಕ್ಕೆ ತೆರಳುವ ಭಕ್ತರಿಗೆ, ಮಹಿಳೆಯರಿಗೆ ಅನಾನೂಕುಲವಾಗುತ್ತಿದೆ ಎಂದು ದಲಿತ ಸಂಘಟನೆ ಮುಖಂಡ ಹರೀಶ ಯಂಟಮಾನ, ಗುತ್ತಿಗೆದಾರ ಮೈಬೂಬ ಮಸಳಿ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಸಂತ ಪೀರ ಗಾಲಿಬಸಾಹೇಬ ದರ್ಗಾಕ್ಕೆ ತೆರಳುವ ರುಕುಂಪುರ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ 4ನೇ ದಿನದ ಧರಣಿ ಸತ್ಯಾಗ್ರದಲ್ಲಿ ಮಾತನಾಡಿದರು.
ತಾಪಂ ಮಾಜಿ ಸದಸ್ಯ ಶಿವಾನಂದ ಜಗತಿ ಮಾತನಾಡಿ, “ಪಟ್ಟಣ ಪಂಚಾಯಿತಿಯ 19 ಮಂದಿ ಸದಸ್ಯರು ಒಟ್ಟಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ಪ್ರಭು ವಾಲೀಕಾರ, ಗಾಲಿಬಸಾಬ ಜಾತ್ರಾ ಕಮಿಟಿ ಅಧ್ಯಕ್ಷ ಬಸವರಾಜ ತೆಲ್ಲೂರ ಮಾತನಾಡಿದರು. ಸ್ವಯಂ ಪ್ರೇರಿತವಾಗಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ, ಬೆಂಬಲ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಯಾವುದೇ ಸಮಯದಲ್ಲೂ ಲಿಂಗನಮಕ್ಕಿಯಿಂದ ನೀರು ಬಿಡುಗಡೆ; ಸ್ಥಳೀಯರಿಗೆ KPCL ಎಚ್ಚರಿಕೆ
ಹೋರಾಟದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಸಂಜೀವಕುಮಾರ ಎಂಟಮಾನ, ಅಶೋಕ ಕೊಳಾರಿ, ಚಂದು ಹಳೆಮನಿ, ಚಂದು ಕಾಂಬಳೆ, ಮಲ್ಲು ಆಚಲೇರಿ, ಮುಖಂಡರಾದ ಬಸವರಾಜ ಹೂಗಾರ, ಶಿವು ಮೇಲಿನಮನಿ, ಶಶಿ ನಾಲ್ನೋಡಿ, ರವಿ ವಾರದ, ಶ್ರೀಶೈಲ ಆಗಸರ, ನಾಗಪ್ಪ ತಳವಾರ, ಅಹಮ್ಮದ ವಾಲಿಕಾರ, ವಾಹಬ ಸುಂಬಡ, ಪಿ ಟಿ ಪಾಟೀಲ, ಯಲ್ಲಪ್ಪ ಬುರಡ, ಬೀಮ ಕಲಕುಟಗೇರ, ಶಿವು ತಳವಾರ, ಶಶಿಧರ ಗಣಿಯಾರ, ನಾಗಪ್ಪ ತಳವಾರ, ಶ್ರೀಶೈಲ ಭೋವಿ, ಮದನ ರಜಪೂತ, ಶ್ರೀಶೈಲ ಕುಂಬಾರ, ಮಲ್ಲು ಜ್ಯೋತಿ, ನಿಂಬಾಜಿ ಚೋರಮಲ್ಲ ಸಿದ್ದು ಬಂಡಗಾರ, ಕರೆಪ್ಪ ಪೂಜಾರಿ ಸೇರಿದ್ದಂತೆ ಪಟ್ಟಣದ ಎಲ್ಲ ಸಮಾಜದವರೂ ಇದ್ದರು.