2024-25ನೇ ಸಾಲಿನಲ್ಲಿ ಇಂಡಿ ತಾಲೂಕಿನ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತೊಗರಿ ಬೆಳೆ ಸಂಪೂರ್ಣ ವಿಫಲವಾಗಿ ಇಳುವರಿ ಬಂದಿಲ್ಲ. ಆದ್ದರಿಂದ ಸರ್ಕಾರ ಶೀಘ್ರ ಬೆಳೆ ಪರಿಹಾರ ನೀಡಬೇಕು ಎಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾಳು ಮುಳಜಿ, ವಕೀಲ ಸೋಮು ನಿಂಬರಗಿಮಠ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬೆಳೆಬಿತ್ತನೆ ಮಾಡಿದ್ದರು. ಮೊದಲು ಬೆಳೆ ಉತ್ತಮವಾಗಿತ್ತು. ನಂತರ ಅಕ್ಟೋಬರ್‌ನಲ್ಲಿ ಮಳೆ ಕಡಿಮೆಯಾಗಿ ಬೆಳೆಗೆ ತೇವಾಂಶದ ಕೊರತೆಯಾಯಿತು. ಅದರ ಜತೆಗೆ ಕಳಪೆ ಬೀಜ ಮುಂತಾದ ಕಾರಣಗಳಿಂದ ತೊಗರಿ ಸರಿಯಾಗಿ ಕಾಳು ಕಟ್ಟಲಿಲ್ಲ. ರೈತರು ತೊಗರಿ ಬೆಳೆಗೆ ಖರ್ಚು ಮಾಡಿದಷ್ಟೂ ಇಳುವರಿ ಬಂದಿಲ್ಲ. ಇದೀಗ ರೈತರು ಮತ್ತೆ ಜಮೀನುಗಳನ್ನು ಬಿತ್ತನೆಗೆ ಸಜ್ಜುಗೊಳಿಸಬೇಕಿದೆ. ಆದ್ದರಿಂದ ಬೆಳೆ ಪರಿಹಾರ ನೀಡಿದರೆ ಈ ವರ್ಷದ ಬಿತ್ತನೆಯ ಬೀಜ, ಗೊಬ್ಬರ ಪಡೆಯಲು ಅನುಕೂಲವಾಗುತ್ತದೆ” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಘೋಷಣೆಗೆ ದವಿಪ ಮನವಿ