ರೈತ ಈ ದೇಶದ ಬೆನ್ನೆಲುಬು. ಆತನ ಸರ್ವತೋಮುಖ ಏಳಿಗೆಯೇ ಕೃಷಿ ವಿಜ್ಞಾನ ಕೇಂದ್ರದ ಗುರಿಯಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ವಿಜಯಪುರ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ವಿಜ್ಞಾನ ಕೇಂದ್ರದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕೃಷಿ ವಿಜ್ಞಾನ ಕೇಂದ್ರ ಕಳೆದ 21 ವರ್ಷಗಳಿಂದ ರೈತರ ಸಾರ್ಥಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ತಂತ್ರಜ್ಞಾನ ವರ್ಗಾವಣೆಯ ಗುರುತರ ಜವಾಬ್ದಾರಿ ಹೊಂದಿದೆ. ಜಿಲ್ಲೆಯಲ್ಲಿ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿಶಿಷ್ಟ ಛಾಪು ಮೂಡಿಸಿದೆ. ಈಕೇಂದ್ರದಿಂದ ಹಮ್ಮಿಕೊಂಡಿರುವ ಕ್ಷೇತ್ರ ಪರಿಶೀಲನೆಗಳಲ್ಲಿ ಮುಖ್ಯವಾಗಿ ನಾನಾ ಬೆಳೆಗಳಲ್ಲಿ ಅಗಲು ಸಾಲು ಪದ್ಧತಿ, ದಾಳಿಂಬೆಯಲ್ಲಿ ದುಂಡಾಣು, ಅಂಗಮಾರಿ ರೋಗ ನಿರ್ವಹಣೆ, ನೂತನ ತೊಗರಿ ಹಾಗೂ ಕಡಲೆ ತಳಿಗಳ ಪರಿಚಯ, ಈರುಳ್ಳಿ ಹಿಂಗಾರು ಜೋಳ ಸರದಿ ಬೆಳೆ ಪದ್ಧತಿ, ಜೋಳ ಮೌಲ್ಯವರ್ಧನೆ, ಗೋಧಿ ಬೆಳೆ ಸಮಗ್ರ ನಿರ್ವಹಣೆ ವಿಷಯಗಳಲ್ಲಿ ರೈತರಿಗೆ ತಾಂತ್ರಿಕ ನೀಡಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಎಸ್.ಎಂ. ವಸ್ತ್ರದ, ವಿಜ್ಞಾನಿ ಡಾ.ಪ್ರಸನ್ ಪಿ.ಎಂ., ಡಾ.ವಿಜಯಲಕ್ಷ್ಮಿ ಮುಂದಿನಮನಿ, ಡಾ.ಕಿರಣ ಸಾಗರ, ಡಾ.ಶಿವರಾಜ ಕಾಂಬಳೆ ಇದ್ದರು.