ವಿಜಯಪುರ ಜಿಲ್ಲೆಯ ರೈತರು ಎಣ್ಣೆಕಾಳು ಬೆಳೆಗಳ ಉತ್ಪಾದನೆಯತ್ತ ಗಮನಹರಿಸಿ, ಈ ಮೂಲಕ ಆದಾಯ ವರದಿ ಹೆಚ್ಚಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರೂಪಾ ಎಲ್ ತಿಳಿಸಿದರು.
ವಿಜಯಪುರ ನಗರದ ಹೊರವಲಯದ ಹಿಟ್ನಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ 2024-2025ನೇ ಸಾಲಿನ ರಾಷ್ಟ್ರೀಯ ಕಾಯ್ದೆ ತೈಲ ಅಭಿಯಾನ ಎಣ್ಣೆಕಾಳು ಯೋಜನೆ ಅಡಿ ಎಣ್ಣೆಕಾಳು ಉತ್ಪಾದನೆಯಲ್ಲಿ ನವೀನ ತಾಂತ್ರಿಕತೆಗಳ ವಿಷಯದ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ತೈಲ ಅಭಿಯಾನ ಎಣ್ಣೆಕಾಳು ಯೋಜನೆ ಅಡಿ ಆಯ್ಕೆ ಮಾಡಿರುವ ಜಿಲ್ಲೆಗಳಲ್ಲಿ ಎಣ್ಣೆಕಾಳು ಬೆಳೆಗಳಲ್ಲಿ ಕ್ಷೇತ್ರ ವಿಸ್ತರಣೆ ಹಾಗೂ ಉತ್ಪಾದಕತೆ ಹೆಚ್ಚುಮಾಡುವ ಮುಖಾಂತರ ಹೆಚ್ಚು ಉತ್ಪಾದನೆ ಸಾಧಿಸಬೇಕಾಗಿದ್ದು, ಈ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆ ಆಯ್ಕೆಯಾಗಿದೆ. ರೈತರಿಗೆ ಪ್ರಮುಖ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ ಕುಸಿಬಿ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ. ರವಿಬೆಳ್ಳಿ ಮಾತನಾಡಿ, “ರೈತರು ಒಂದೇ ಬೆಳೆಯನ್ನು ಬೆಳೆಯದೆ ಇತರೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಎಣ್ಣೆಕಾಳು ಬೆಳೆಯಲು ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಸ್ಥಿರಗೊಳಿಸುವುದಲ್ಲದೆ ರೈತರು ಕೃಷಿ ಆದಾಯ ಹೆಚ್ಚಿಸುವುದರ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಮಾಲಾ ಡಿ ಬಡಿಗೇರ ಆಯ್ಕೆ
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್ ಎಂ ವಸ್ತ್ರದ, ಡಾಕ್ಟರ್ ಶಿವಶಂಕರಮೂರ್ತಿ ಎಂ, ವಿಜ್ಞಾನಿಗಳಾದ ಡಾ. ಪ್ರಸನ್ನ ಪಿ, ಡಾ. ಶಿಲ್ಪ ಚೋಗಟಾಪುರ, ಡಾ. ಕಿರಣ್ ಸಾಗರ, ಡಾ. ವಿವೇಕ್ ದೇವರನಾವಾದಾಗಿ ಎಣ್ಣೆಕಾಳು ಉತ್ಪಾದನೆ ಕುರಿತು ತಾಂತ್ರಿಕ ಸಲಹೆ ನೀಡಿದರು.
ತರಬೇತಿಯಲ್ಲಿ ಉಪ ಕೃಷಿ ನಿರ್ದೇಶಕ ಡಾ.ಪ್ರಕಾಶ್ ಚೌಹಾಣ್, ಚಂದ್ರಕಾಂತ ಪವಾರ, ಡಾ.ಬಾಲರಾಜ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಬಾವಿಕಟ್ಟಿ, ಡಾ. ಎಚ್ ವೈ ಸಿಂಗೇಗೋಳ, ಎಂ ಎಚ್ ಯರಜರಿ, ಡಾ. ಎಸ್ ಇನಾಮದಾರ, ಪ್ರಕಾಶ್ ಕಳಸಗೊಂಡ, ಎಸ್ ಕೆ ಬಿರಾದಾರ ಸೇರಿದಂತೆ ಇಲಾಖೆಯ ವಿವಿಧ ತಾಲೂಕು ಹೋಬಳಿಗಳಿಂದ ಬಂದ ಕೃಷಿ ಅಧಿಕಾರಿಗಳು, ಆತ್ಮ ಯೋಜನೆ ಸಿಬ್ಬಂದಿ ಇದ್ದರು.