ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಮಹಿಳಾ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ್ ಏನ್.ಎಲ್ ಅವರು ಲೈಂಗಿಕ ಕಿರುಕುಳ ನೀಡಿ, ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯು ಕುಲಪತಿ ಪ್ರೊ. ಬಿ.ಕೆ ತುಳಸಿಮಾಲಾ ಮತ್ತು ಕುಲ ಸಚಿವರಿಗೆ ದೂರು ನೀಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯು ಫೆಬ್ರುವರಿ 27ರಂದು ದೂರು ನೀಡಿದ್ದು, ಯು ಜಿ ಸಿ ನೇಮಾವಳಿ ಪ್ರಕಾರ ರಚಿತ ಅಂತರಿಕ ದೂರ ಸಮಿತಿಗೆ ಪ್ರಕರಣವನ್ನು ವಹಿಸಲಾಗಿದೆ.
ಆಂತರಿಕ ದೂರು ಸಮಿತಿಯು ಪ್ರಕರಣದ ಸಂಬಂಧ ಇಬ್ಬರನ್ನು ವಿಚಾರಣೆ ನಡೆಸಿ, ವರದಿ ನೀಡಿದ ಬಳಿಕ ಯಾರೇ ತಪ್ಪಿತಸ್ಥರಿದ್ದರೂ ಕೂಡ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಈದಿನ. ಕಾಮ್‌ಗೆ ತಿಳಿಸಿದ್ದಾರೆ.
ಸುಮಾರು 20 ವರ್ಷದ ಹಿನ್ನೆಲೆ ಇರುವ ಮಹಿಳಾ ಯುನಿವರ್ಸಿಟಿಗೆ ಬಹಳ ಹಿನ್ನೆಲೆ ಇದೆ ಇದರದೇ ಆದ ಗೌರವ ಇದೆ ಇಂತಹ ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಕಳವಳ ವ್ಯಕ್ತಿ ಪಡಿಸಿದರು.