ಮಹಿಳೆಯ ಉಡಿಯಲ್ಲಿಯೇ ಜಾನಪದ ಸಾಹಿತ್ಯ ಹುಟ್ಟಿಕೊಂಡಿದ್ದು, ಮಹಿಳೆ ತನ್ನ ಜೀವನದ ಅನುಭಾವವನ್ನು ತ್ರಿಪದಿಯ ಮೂಲಕ ಹಾಡಿ ಜಾನಪದ ಸಾಹಿತ್ಯವನ್ನು ಮನೆ ಮನೆಗೆ ಮುಟ್ಟಿಸಿದ ಗರತಿಯ ಹಾಡುಗಳು ಜನಪ್ರಿಯತೆ ಉಳಿಸಿಕೊಂಡಿವೆ ಎಂದು ವಿಜಯಪುರದ ಶಿವಶರಣೆ ದಾನಮ್ಮ ದೇವಸ್ಥಾನದ 14ನೇ ಜಾತ್ರಾ ಮಹೋತ್ಸವದ ನಿಮಿತ್ತ ಕಾರ್ಯಕ್ರಮದಲ್ಲಿ ಜಾನಪದ ಚಿಂತಕಿ ಶಿವಲೀಲಾ ಮುರಾಳ ಉಪನ್ಯಾಸ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ನಡೆದ ಜಾನಪದ ಗೋಷ್ಠಿಯಲ್ಲಿ ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿ, ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು ಗ್ರಾಮೀಣ ಭಾಗದ ಜನರೇ ಜಾನಪದ ಸಾಹಿತ್ಯದ ಮಾಲೀಕರು ಎಂದರು. ಜಾನಪದ ಸಾಹಿತ್ಯ ವಿದ್ವಾಂಸ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಬಿ.ಎನ್ ಪಾಟೀಲ ಮಾತನಾಡಿ, ರೈತರು ಹಾಗೂ ರೈತ ಮಹಿಳೆಯರು ದಿನನಿತ್ಯ ಜಾನಪದ ಹಾಡುಗಳನ್ನು ಹಾಡಿ ಪ್ರಸಾರ ಮಾಡಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ. ಅನೇಕ ರೈತಾಪಿ ಜನರು ರಚಿಸಿ ಜಾನಪದ ಹಾಡುಗಳನ್ನು ಹಾಡಿ ರಂಜಿಸಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ಬುನಾದಿ ಎಂದರು.
ಇದನ್ನು ಓದಿದ್ದೀರಾ? ವಿಜಯಪುರ | ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು: ಗಂಗಾಧರ ಸೋನಾರ
ಕಾರ್ಯಕ್ರಮದಲ್ಲಿ ಶಿವಾನಂದ ಮಂಗಾನವರ, ಮಹೆತಾಬ ಕಾಗವಾಡ ರೈತ ಗೀತೆ ಹಾಗು ತತ್ವಪದಗಳನ್ನು ಹಾಡಿದರು. ಸಾವಿತ್ರಿ ಮಠ ಯೋಗಾಭ್ಯಾಸದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಅಪ್ಪು ಇಟ್ಟಂಗಿ, ರಶ್ಮಿ ಕೋರಿ, ರುದ್ರಗೌಡ ಪಾಟೀಲ,ಆರ್.ಎಮ್.ತೊನಶ್ಯಾಳ ವೇದಿಕೆ ಮೇಲಿದ್ದರು. ಎಂ.ಬಿ. ಮೂಲಿಮನಿ, ಎಚ್.ಎಮ್. ಬೋರಾವತ, ಪಾಟೀಲ, ರವೀಂದ್ರ ಬಾವೂರ, ಎಮ್.ಎಸ್.ಮೇಟಿ, ಸುಜಾತಾ ಕತ್ತಿ, ಕಮಲಾ ಜುಮನಾಳ, ಗಂಗಾಬಾಯಿ ಸಜ್ಜನ, ಬಸವರಾಜ ಮರನೂರ, ಸಿ.ಎಸ್. ಚಟ್ಟೆರ, ಪ್ರೇಮಾ ನಂದಿ, ಡಾ. ಸವಿತಾ ಝಳಕಿ, ಕವಿತಾ ಕಲ್ಯಾಣಪ್ಪಗೋಳ, ಶೋಭಾ ಮೇಡೆಗಾರ, ಸಹದೇವ ನಾಡಗೌಡ, ಎಮ್.ಜಿ ಸಜ್ಜನ, ಸುಭಾಷ ಕರಿಕಬ್ಬಿ, ಎಸ್.ಎಸ್. ಶಿವರಾಯಗೋಳ, ಜಯಶ್ರೀ ಹಿರೇಮಠ, ಮಹಮ್ಮದ ಗೌಸ ಹವಾಲ್ದಾರ ಮುಂತಾದವರು ಉಪಸ್ಥಿತರಿದ್ದರು.