ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಜನಗಳಿಗೆ ಕೆಲಸಗಳ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಇದನ್ನು ಮನಗಂಡು ನಮ್ಮ ಸಂಸ್ಥೆ ಸುಮಾರು 24 ವರ್ಷಗಳಿಂದ ದೇವರ ಹಿಪ್ಪರಗಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಸುತ್ತಿದೆ ಎಂದು ಸಿಸ್ಟರ್ ಹೃದಯ ಮೇರಿಯವರು ಹೇಳಿದರು.
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಜೀಸಸ್ ಮೇರಿ ಜೋಸೆಫ್ ಸಂಸ್ಥೆ ಬೆಂಗಳೂರು ಪ್ರಾಂತ್ಯದಿಂದ ನಡೆದ ಉಚಿತ ವೈದ್ಯಕೀಯ ತಪಾಸಣ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಣ್ಣೂರಿನಲ್ಲಿಯೂ ಇಂದು ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಇಲ್ಲಿನ ಬಹುತೇಕ ಜನರಿಗೆ, ಅದು ಬಹಳ ಮುಖ್ಯವಾಗಿ ಮಹಿಳೆಯರಲ್ಲಿ ಶುಗರ್, ಬಿಪಿ ಅತಿ ಹೆಚ್ಚು ಕಂಡುಬರುತ್ತಿದೆ. ನಿರಂತರವಾಗಿ ತಪಾಸಣೆ ಮಾಡುವುದರ ಮೂಲಕ ರೋಗವನ್ನು ಪತ್ತೆ ಹಚ್ಚಿ ಗುಣಪಡಿಸಲು ನಮ್ಮ ವೈದ್ಯರ ತಂಡ ಕಾರ್ಯಪ್ರವೃತ್ತವಾಗಿದೆ” ಎಂದರು.
“ನಮ್ಮ ಸಂಸ್ಥೆ ನಿರಂತರವಾಗಿ ಹಳ್ಳಿಗಳಿಗೆ ಹೋಗಿ ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತದೆ” ಎಂದರು.
ಸುಮಾರು ನೂರಕ್ಕೂ ಹೆಚ್ಚು ಮಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಇದೇ ವೇಳೆ ಹೆಲ್ತ್ ಕಾರ್ಡ್‌ಗಳನ್ನೂ ಮಾಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಬ್ಬನ್ ಪಾರ್ಕ್ | ಬಹುಮಹಡಿ ಕಟ್ಟಡ ವಿವಾದ, ಬೆಂಗಳೂರಿಗರ ಪ್ರತಿಭಟನೆ
ಕಮ್ಯುನಿಟಿ ಮೆಡಿಕಲ್ ಆಫೀಸರ್ ಸಿಸ್ಟರ್ ರುಕ್ಮಣಿ, ಮಣ್ಣೂರು ಗ್ರಾಮದ ಮುಖಂಡರುಗಳಾದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಉಪಾಧ್ಯಕ್ಷ ಚಂದ್ರಕಾಂತ್ ಶಾತಪ್ಪ ಪ್ಯಾಟಿ, ಮಣ್ಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಂಬಣ್ಣ ಆನೆಗುಂದಿ, ಗ್ರಾಮಸ್ಥರು, ಸಿಎನ್‌ಎಫ್ ನರ್ಸ್‌ಗಳಾದ ಸಿಸ್ಟರ್ ಶಕುಂತಲಾ, ಶೃತಿ, ಪ್ರೀತಿ, ಕರೀಷ್ಮಾ, ದಾನಯ್ಯ, ಶಾಂತ ದೇಗಿನಾಹಾಳ ಸೇರಿದಂತೆ ಇತರರು ಇದ್ದರು.