ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದಿಂದ ಹರೀಶ್ ಡಿ. ಕೆ ಅವರುಗೆ ಪಿಎಚ್.ಡಿ ಪದವಿ ನೀಡಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರು ಡಾ. ಎಸ್. ಜಿ. ಅಂಗಡಿ ಅವರ ಮಾರ್ಗದರ್ಶನದಲ್ಲಿ “ನ್ಯಾನೋ ಗೊಬ್ಬರಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಈರುಳ್ಳಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ” ಕುರಿತು ಮಹಾಪ್ರಬಂದವನ್ನು ಹರೀಶ್ ಡಿ. ಕೆ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದು, ಕೃಷಿ ವಿವಿ ಅವರಿಗೆ ಪಿಎಚ್.ಡಿ ಪದವಿ ನೀಡಿದೆ.
ಈ ಮಹಾಪ್ರಬಂಧವನ್ನು ಮೌಲ್ಯಮಾಪನ ಮಾಡಿದ ತಜ್ಞರು ನೀಡಿದ ಸಕಾರಾತ್ಮಕ ವರದಿಯನ್ನು ಪರಿಗಣಿಸಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಡಾ.ಹರೀಶ್ ಡಿ.ಕೆ. ಅವರಿಗೆ ಪಿಎಚ್ಡಿ ಪದವಿ ನೀಡಿ ಅಧಿಸೂಚನೆ ಹೊರಡಿಸಿದೆ.
ಹರೀಶ್ ಡಿ.ಕೆ. ಅವರು ವಿಜಯಪುರ ನಗರದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಭಾಗದ ವಿಜ್ಞಾನಿ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
