ಭಾರೀ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಮೂಕಿಹಾಳ ಬಳಿಯ ಸೋಗಲಿ ಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆಲಮಟ್ಟದ ಸೇತುವೆ ಮೇಲೆ ನೀರು ಹೆಚ್ಚಾಗಿ, ಕೆಲ ಗ್ರಾಮ, ಪಟ್ಟಣಗಳು ಸೇರಿ ಅಂತರ ಜಿಲ್ಲಾ ಮಾರ್ಗಗಳ ಸಂಪರ್ಕ ಕಡಿತವಾಗಿದೆ. ಮುದ್ದೇಬಿಹಾಳ, ಬಸವನಬಾಗೇವಾಡಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಮಂಗಳೂರು ಬೆಂಗಳೂರು ರಸ್ತೆ ಸಂಪರ್ಕವು ಕಡಿತವಾಗಿದೆ. ಹುಣಸಗಿ, ಸುರಪುರ, ಕಲಬುರ್ಗಿ, ಲಿಂಗಸೂರು ರಾಯಚೂರು, ಬೀದರ್ ಮಾರ್ಗಗಳು ಬಂದ್ ಆಗಿವೆ.
ತಾಳಿಕೋಟೆಯಲ್ಲಿ ನಡೆಯುತ್ತಿರುವ ಇಸ್ತಮಾ ಕಾರ್ಯಕ್ರಮಕ್ಕೆಂದು ವಿವಿಧ ಭಾಗಗಳಿಂದ ಬಂದಿದ್ದ ಐವತ್ತಕ್ಕೂ ಅಧಿಕ ವಾಹನಗಳು ಮುಖ್ಯಹಾಳ ದರ್ಗಾದಲ್ಲಿ ಬೀಡು ಬಿಟ್ಟಿವೆ. ಪಟ್ಟಣದಿಂದ ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಮೇಲು ದೋಣಿ ನದಿ ನೀರು ಮತ್ತಷ್ಟು ಆವರಿಸಿದ್ದರಿಂದ ಶನಿವಾರವು ಅಣಗಿನಾಳ ಮುಖ್ಯಹಾಳ ಮೆಣಜಿಗೆ ಮಾರ್ಗದಿಂದ ವಾಹನಗಳು ಸಂಚರಿಸಿವೆ.
ದೋಣಿ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆನಾಶದ ಭೀತಿ ಎದುರಾಗಿದೆ. ಗುತ್ತಿಹಾಳ ಬೋಳವಾಡ ತುಂಬಗಿ ಶಾಸನೂರ ಮೊದಲಾದ ಗ್ರಾಮಗಳ ಸುಮಾರು ರೂ.200ಕ್ಕೂ ಅಧಿಕ ಆಕ್ಟರ್ ಪ್ರದೇಶದ ಜಮೀನು ಜಲಾವೃತವಾಗಿದೆ. ಹತ್ತಿ ತೊಗರಿ ಸೂರ್ಯಕಾಂತಿ ಬೆಳೆಗಳು ನೀರಿನಲ್ಲಿ ಮುಳುಗಿವೆ.
ಇದನ್ನೂ ಓದಿ: ವಿಜಯಪುರ | ʼಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ಯುವಜನತೆ ಪತ್ರಕರ್ತರಾಗುತ್ತಿದ್ದಾರೆʼ
ದೋನಿ ನದಿ ಪ್ರವಾಹ ಪೀಡಿತ ಜಮೀನುಗಳಿಗೆ ವಿಪತ್ತು ನಿರ್ವಹಣೆ ನೋಡಲ್ ಅಧಿಕಾರಿಯೂ ಆದ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್ ಮತ್ತು ತಾಳಿಕೋಟೆ ತಸಿಲ್ದಾರ ವಿನಯ ಹೂಗಾರ್ ಭೇಟಿ ನೀಡಿ ಪರಿಶೀಲಿಸಿದರು.
ತಾಳಿಕೋಟೆಯ ವಿಜಯಪುರ ರಸ್ತೆಯಲ್ಲಿ 110ಕೆ ಹೆಚ್ ಬಿ ಸಾವಿರದ ಬಳಿಯ ಜಮೀನಿನಲ್ಲಿ ವಾಸವಿರುವ ಚಂದ್ರಮ ಹಲಗಲ್ ಅವರ ಮನೆ ಸುತ್ತ ನೀರು ಆವರಿಸಿದೆ. ವಿಷ ಜಂತುಗಳು ಮನೆಯೊಳಗೆ ಬರುತ್ತಿದ್ದು ಎಲ್ಲಾ ಸಾಮಗ್ರಿಗಳು ಹಾಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.