ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ವಿಜಯಪುರ ಜಿಲ್ಲೆಯ 13 ಗ್ರಾಮಗಳಲ್ಲಿ ಜನವರಿ 4ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ತಿಳಿಸಿದ್ದಾರೆ.
ಪತ್ರಿಕೆ ಪ್ರಕಟಣೆ ತಿಳಿಸಿರುವ ಅವರು, “ಜನವರಿ 4ರ ಬೆಳಿಗ್ಗೆ 11ಕ್ಕೆ ನಗರದ ಯೋಗಾಪುರ ಕಾಲೋನಿಯ ವಾರ್ಡ್ ನಂ.16ರ ಹನುಮಾನ ದೇವಸ್ಥಾನ, ಬಿಸನಾಳ ಗ್ರಾಮದ ಹನುಮಾನ ದೇವಸ್ಥಾನ, ಕೋಟ್ಯಾಳ ಗ್ರಾಮದ ಹನುಮಾನ ದೇವಸ್ಥಾನ, ಬೆಳ್ಳುಬ್ಬಿ ಗ್ರಾಮದ ಮಳೆಸ್ವಾಮಿ ದೇವಸ್ಥಾನ, ಗಣಿ ಗ್ರಾಮದ ಬಸವೇಶ್ವರ ದೇವಸ್ಥಾನ, ತಡಲಗಿ ಗ್ರಾಮದ ರಾಮಾ ಅವದೂತ ಮಠ, ಆಲಕೋಪ್ಪರ ಗ್ರಾಮದ ಗ್ರಾಮದೇವತೆ ದೇವಸ್ಥಾನ, ಶಿವಪುರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ನಂದ್ರಾಳ ಗ್ರಾಮದ ಗ್ರಾಮ ಚಾವಡಿ, ಕಣ್ಣಗುಡ್ಡಿಹಾಳ ಗ್ರಾಮದ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆ, ಹಂಚಲಿ ಗ್ರಾಮದ ಹನುಮಾನ ದೇವಸ್ಥಾನ, ಆಹೇರಿ ಗ್ರಾಮದ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಯಲ್ಲಿ ಪಿಂಚಣಿ ಅದಾಲತ್ ಜರುಗಲಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ ವಿವಿಯಲ್ಲಿ ಎಂಬಿಎ-ಎಂಸಿಎ ಸ್ನಾತಕೋತ್ತರ ವಿಭಾಗ ತೆರೆಯುವಂತೆ ಕರವೇ ಆಗ್ರಹ
“ಸಾಮಾಜಿಕ ಭದ್ರತೆ ಪಿಂಚಣಿ ಫಲಾನುಭವಿಗಳು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೇ ಎನ್‌ಪಿಸಿಐ ಮ್ಯಾಪಿಂಗ್ ಕಾರ್ಯವನ್ನು ಮಾಡಿಸಬೇಕು. ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ” ಎಂದರು.