ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರವು ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಜನತೆ ಅನುಭವಿಸಿದೆ. ಸದ್ಯ ಇದೀಗ ತಮ್ಮ ಆರೋಗ್ಯ ಸೇವೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ನಿಮ್ಮ ಸಹಕಾರಕ್ಕೆ ನಾವು ಸದಾ ಇರುತ್ತೇವೆ. ಸೇವೆಗೆ ಹಿಂಜರಿಯಬೇಡಿ ಎಂದು ಡಿಎಸ್ಎಸ್ ಹೋಬಳಿ ಘಟಕದ ಅಧ್ಯಕ್ಷ ಗುಂಡಪ್ಪ ಚಲವಾದಿ ವೈದ್ಯರಿಗೆ ಸಾಥ್ ನೀಡಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯ ಡಾ.ರಂಗನಾಥ ವೈದ್ಯ ಸೇರಿದಂತೆ ಐದು ಮಂದಿ ವೈದ್ಯರಿಗೆ ಡಿಎಸ್ಎಸ್ ನಾಲತವಾಡ ಹೋಬಳಿ ಸಂಚಾಲಕರ ಹಾಗೂ ವಿವಿಧ ಸಂಘಟಕರು ಹಮ್ಮಿಕೊಂಡಿದ್ದ ನಾಗರಿಕ ಸಮಾರಂಭದಲ್ಲಿ ಮಾತನಾಡಿದರು.
“ಇಲ್ಲಿರುವ ಹಲವು ಸಿಬ್ಬಂದಿಗಳಿಗೆ ಸಮಯ ಪ್ರಜ್ಞೆ ಬೇಕಿದ್ದು, ಅಂಥವರಿಗಾಗಿ ಮೊದಲು ಸಭೆ ಕರೆದು ಉತ್ತಮ ಸೇವೆಗೆ ಸಮಯ ಪಾಲನೆ ಮಾಡುವಂತೆ ಸೂಚಿಸಬೇಕು” ಎಂದು ಮನವಿ ಮಾಡಿಕೊಂಡರು.
ಸನ್ಮಾನ ಸ್ವೀಕರಿಸಿ ಡಾ.ರಂಗನಾಥ ವೈದ್ಯ ಮಾತನಾಡಿ, “ನನ್ನೊಂದಿಗೆ ಇನ್ನುಳಿದ ವೈದ್ಯರೂ ಕೂಡ ಎಂಬಿಬಿಎಸ್ ಮುಗಿಸಿದ್ದು, ಅವರೂ ಕೂಡಾ ಯುವಕರಿದ್ದಾರೆ. ಅವರೊಂದಿಗೆ ತಮ್ಮ ಸಹಕಾರದಿಂದ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಹೃದಯಾಘಾತದಿಂದ ಕೆಎಸ್‌ಆರ್‌ಟಿಸಿ ನೌಕರ ನಿಧನ
ಈ ವೇಳೆ ಸನ್ಮಾನ ಸ್ವೀಕರಿಸಿದ ಡಾ.ಅರ್ಪಿತಾ ಚಿನಿ ವಾಲರ, ಡಾ.ರೇಶ್ಚಾ ಹವೇಲಿ ಹಾಗೂ ಕೆಪಿಸಿಸಿ ಘಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕಧ್ಯಕ್ಷ ಮೈಬೂಬ ಕುಳಗೇರಿ, ಶಿವು ಪಟ್ಟಣಶೆಟ್ಟಿ, ದಂಡಪ್ಪ ಜಾವಳಗೇರಿ, ಕರವೇ ಸಂಘಟಕ ಕಾಶೀಮ ಗಂಗೂರ, ಕಾಶೀಬಾಯಿ, ಮುನ್ನಾ ಹೊನ್ನುಟಗಿ, ಕವಿತಾ ಪಾಟೀಲ, ಕಾಶೀಮಪಟೇಲ ಬಿದರಕೋಟಿ, ಬಸವರಾಜ ಹಳ್ಳಿ, ಮುತ್ತಣ್ಣ ಕೂಡಲಗಿ, ಮಹಾಂತೇಶ ಹಡಪದ ಇದ್ದರು.