ಸಾರ್ವಜನಿಕ ಈಜುಕೊಳದಲ್ಲಿ ಅವ್ಯವಹಾರ ಕಂಡುಬರುತ್ತಿದ್ದು, ವ್ಯವಸ್ಥಾಪಕಿಯನ್ನು ಕೂಡಲೇ ಬದಲಾವಣೆ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆ ಕನಕದಾಸ ಬಡಾವಣೆಯ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
“ಜಿಲ್ಲೆಯ ಕನಕದಾಸ ಬಡಾವಣೆಯಲ್ಲಿ ಕಳೆದ ಒಂದು ವರ್ಷದಿಂದ ಈಜುಗೊಳ ಪ್ರಾರಂಭವಾಗಿದ್ದು, ಈ ಈಜುಕೊಳದಲ್ಲಿ ಪ್ರತಿನಿತ್ಯ ದೈನಂದಿನ ತರಬೇತಿಗಾಗಿ ಬಹುತೇಕರು ಆಗಮಿಸುತ್ತಿದ್ದಾರೆ. ಆದರೆ, ಈಗ ಚಳಿಗಾಲವಿರುವುದರಿಂದ ಈಜುಗೊಳಕ್ಕೆ ಕೆಲವು ಮಂದಿ ಬರುತ್ತಿದ್ದಾರೆ” ಎಂದು ತಿಳಿಸಿದರು.
“ಈಜುಕೊಳಕ್ಕೆ ನೇಮಕವಾಗಿರುವ ಮಹಿಳಾ ಮ್ಯಾನೇಜರ್ ಪತ್ರಿನಿತ್ಯ ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಉಳಿದ ಸಿಬ್ಬಂದಿಯೂ ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ಜೊತೆಗೆ ಸಿಬ್ಬಂದಿ ನಡುವೆ ಹೊಂದಾಣಿಕೆಯೂ ಇಲ್ಲ” ಎಂದು ಟೀಕಿಸಿದರು.
“ಪ್ರತಿದಿನ ಈಜುಗೊಳಕ್ಕೆ ಬರುವ ಜನರಿಗೆ ಟಿಕೆಟ್ ನೀಡುವುದು ಮಹಿಳಾ ಮ್ಯಾನೇಜರ್ ಕೆಲಸ. ಆದರೆ, ಇವರು ಟಿಕೆಟ್ ನೀಡಲು ಡಿ ಗ್ರೂಪ್ ಸಿಬ್ಬಂದಿಗೆ ವಹಿಸಿ ಹೊರಗಡೆ ಹೋಗುತ್ತಾರೆ. ಇವರು ಯಾವುದೇ ರೀತಿಯ ಕಂಪ್ಯೂಟರ್ ಜ್ಞಾನ ಹಾಗೂ ಅಕೌಂಟ್ ಬಗ್ಗೆ ಅನುಭವ ಹೊಂದಿಲ್ಲ” ಎಂದು ಆರೋಪಿಸಿದರು.

“ಟಿಕೆಟ್ ನೀಡುವಿಕೆಯಲ್ಲಿ ಗೋಲಮಾಲ್ ನಡೆಯುತ್ತಿದ್ದು, ಒಬ್ಬರಿಗೆ ₹100 ಶುಲ್ಕ ನಿಗದಿಪಡಿಸಲಾಗಿದೆ. ಒಟ್ಟಿಗೆ ಐದು ಮಂದಿ ಬಂದರೆ, ಒಬ್ಬರ ಹೆಸರು ಬರೆದು + 4= ₹500 ಅಂತ ಟಿಕೇಟಿನ ಮೇಲೆ ಬರೆದು ಜನರಿಗೆ ಕೊಡುತ್ತಾರೆ. ಆದರೆ ರಿಜಿಸ್ಟರ್‌ನಲ್ಲಿ ₹100 ಅಂತ ಬರೆಯುತ್ತಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿದ್ಯುತ್ ದರ ಏರಿಕೆ; ಜೂ.22ರ ಕರ್ನಾಟಕ ಬಂದ್ ಕರೆ ವಾಪಸು
“ಅಕ್ರಮದ ಕುರಿತು ವಿಚಾರಿಸಿದರೆ ʼನಿಮಗೇನು ಮಾಡುವುದು ಮುಚ್ಚಿಕೊಂಡ ಸ್ವಿಮಿಂಗ್ ಮಾಡಿʼ ಅಂತ ನಮ್ಮ ಮೇಲೆಯೇ ಚಿರಾಡುತ್ತಾರೆ. ಅಂದರೆ ಇವರು ಸರ್ಕಾರಕ್ಕೆ ತೋರಿಸುವ ಮೊತ್ತ ₹100 ಮಾತ್ರ, ಮಿಕ್ಕ ₹400 ಇವರ ಪಾಕೆಟ್‌ಗೆ ಹೋಗುತ್ತದೆ. ಇದನ್ನು ಪರಿಶೀಲನೆ ಮಾಡಲು ಸಹಾಯಕ ನಿರ್ದೇಶಕರಿಗೆ ಹಲವು ಬಾರಿ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಎಲ್ಲ ದಾಖಲೆಗಳ ಮಾಹಿತಿಯನ್ನು ಪತ್ರದೊಂದಿಗೆ ಲಗತ್ತಿಸಿದ್ದೇವೆ. ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮೋಸ ಮಾಡಿರುವುದನ್ನು ಗಮನಿಸಿ ದಂಡದ ಸಮೇತ ಹಣವನ್ನು ವಸೂಲಿ ಮಾಡಬೇಕು. ಜೊತೆಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕನಕದಾಸ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.