ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ರಸ್ತೆಯಲ್ಲಿ ನಡೆದಿದೆ.
ಅಣ್ಣಪ್ಪಾ ಇಂಡಿ, ಬಾಬುರಾವ್ ಕೇದಾರ ಬಂಧಿತ ಆರೋಪಿಗಳಾಗಿದ್ದು, ಗುರುರಾಜ್ ಬಿರಾದಾರ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿಗಳು ಪಿಕ್ ಅಪ್ ವಾಹನದಲ್ಲಿ 640 ಕೆಜಿ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ದಾಳಿಗೈದು ಅಕ್ಕಿ ಸೇರಿದಂತೆ ವಾಹನವನ್ನೂ ಜಪ್ತಿ ಮಾಡಿದ್ದಾರೆ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಐಟಿಸಿ ಕಂಪನಿ ಉತ್ಪಾದನಾ ಘಟಕ ಉದ್ಘಾಟಿಸಿದ ಮುಖ್ಯಮಂತ್ರಿ
ಈ ಸಂದರ್ಭದಲ್ಲಿ ಇಂಡಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಹಾಗೂ ಇಂಡಿ ಗ್ರಾಮೀಣ ಸಿಪಿಐನ ಎಂ ಡಪಿನ ಇದ್ದರು.