ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೆ ಸಮಗಾರ ಹರಳಯ್ಯ ಸಮುದಾಯದ ಹೆಮ್ಮೆಯ ಪುತ್ರಿ ರಕ್ಷಿತಾ ಪಂಡಿತ ಕೊಡಹೊನ್ನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 620 ಅಂಕ ಪಡೆದು ಇಂಡಿ ತಾಲೂಕಿಗೆ ಪ್ರಥಮ ವಿದ್ಯಾರ್ಥಿನಿಯಾಗಿ ಯಶಸ್ಸು ಸಾಧಿಸುವುದರಿಂದ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ವಿದ್ಯಾರ್ಥಿನಿಯ ಸಾಧನೆ ಸಮುದಾಯದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಪ್ರಸ್ತುತ ಸಂದರ್ಭದಲ್ಲಿ ಸಮಾಜದ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ತುಂಬಾ ಹಿಂದುಳಿದಿದೆ. ಇಂತಹ ಸಂದರ್ಭದಲ್ಲಿ ಈ ವಿದ್ಯಾರ್ಥಿನಿಯ ಸಾಧನೆ ಸಮಾಜಕ್ಕೆ ಹೆಮ್ಮೆ ಹಾಗೂ ಗೌರವ ತಂದಿದೆ. ಜತೆಗೆ ಸಮಾಜದ ಇನ್ನಿತರ ವಿದ್ಯಾರ್ಥಿಗಳು ಶೇ.90ಕ್ಕಿಂತಲೂ ಹೆಚ್ಚಿಗೆ ಅಂಕ ಪಡೆದಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಗುವುದು ಎನ್ನಲಾಗಿದೆ.
ಸಮಾಜದ ಮುಖಂಡ ಮಹೇಶ ಶಿವಪ್ಪ ಹೊನ್ನಬಿಂದಗಿ, ರಾಯಪ್ಪ ಹರಳಯ್ಯ, ರಾಯಗೊಂಡ ರಗಟೆ, ಕಾಶಿನಾಥ ಹೊಸಮನಿ, ಜಗನ್ನಾಥ ಕೊಡತೆ, ಶ್ರೀನಿವಾಸ ಶಹಾಪುರ ವಿಜಯಪುರ, ಸೋಮು ಹೊನ್ನಕಟ್ಟಿ, ಪಂಡಿತ ಕೊಡಹೊನ್ನ ಇದ್ದರು.
ಈ ಸುದ್ದಿ ಓದಿದ್ದೀರಾ? ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ 2025: ಶಿವರಾಜಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಸಮುದಾಯದ ಎಲ್ಲ ಬಾಂಧವರು ಒಳಮೀಸಲಾತಿ ಕುರಿತು ಜಾತಿ ಸಮೀಕ್ಷೆ ನಡದಿದೆ. ಕಾರಣ ತಾವೆಲ್ಲರೂ ಜಾಗೃತವಹಿಸಿ 93 ಕೋಡ್ ನಂಬರ್‌ನ ಸಮಗಾರ ಜಾತಿ ಎಂದು ನಮೂದಿಸಬೇಕು. ಕುಲಕಸಬು ಕೇಳಿದ್ರೆ ಚರ್ಮಗಾರಿಕೆ ಅಥವಾ ಪಾದರಕ್ಷೆ ತಯಾರಿಸುವುದು ಅಂತಾ ನಮೂದಿಸಬೇಕು. ಕಡ್ಡಾಯವಾಗಿ ಗಣತಿದಾರರು ಬರದೇ ಇದ್ದರೆ ಹುಡುಕಿ ಹೋಗಿ ನಮ್ಮ ಹಟ್ಟಿಗಳಿಗೆ ಕರೆತಂದು ಸಮುದಾಯದ ಎಲ್ಲರ ಮಾಹಿತಿ ಸಲ್ಲಿಸಬೇಕು ಎಂದು ಸಮಗಾರ ಹರಳಯ್ಯ ಸಮುದಾಯದ ಮುಖಂಡರು ತಿಳಿಸಿದರು.