ಇಂದಿರಾಗಾಂಧಿಯವರು ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕಂಡ ಧೀಮಂತ ನಾಯಕಿ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್ ಲೋಣಿ ಸ್ಮರಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂದಿರಾಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಇಂದಿರಾಗಾಂಧಿಯವರು ಬಾಲಕಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರ್ಯ ನಂತರ ಭಾರತದ ಪ್ರಧಾನಮಂತ್ರಿಯಾಗಿ ತಮ್ಮ ಇಡೀ ಜೀವನವನ್ನು ದೀನದಲಿತರು, ಬಡವರಿಗಾಗಿ ಮೀಸಲಿಟ್ಟಿದ್ದರು. ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಉಳುವವನೇ ಭೂಮಿಯ ಒಡೆಯ, ಗರೀಬಿ ಹಟಾವೊ, ಬ್ಯಾಂಕ್‌ಗಳ ರಾಷ್ಟ್ರೀಕರಣ, 20 ಅಂಶಗಳ ಕಾರ್ಯಕ್ರಮ, ಆರ್ಥಿಕ ಸುಧಾರಣೆ, ಖಾಸಗಿ ಭತ್ಯೆ ರದ್ದತಿ ಸೇರಿದಂತೆ ಅನೇಕ ನಿರ್ಣಯಗಳನ್ನು ಜಾರಿಗೊಳಿಸಿ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸಿದರು. ಅವರ ಜೀವನ ಮತ್ತು ಸಾಧನೆಗಳು ಪ್ರತಿಯೊಬ್ಬ ಭಾರತೀಯರಿಗೂ ಆದರ್ಶಪ್ರಾಯವಾಗಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಡವರಿಗೆ ಅನ್ಯಾಯ : ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ವಾಗ್ದಾಳಿ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ್ ಕಾಲೇಬಾಗ, ಡಾ. ರವಿ ಬಿರಾದಾರ, ಮಹಾದೇವಿ ಗೋಕಾಕ, ಜಯಶ್ರೀ ಭಾರತೆ, ಮಹಿಳಾ ಕಾಂಗ್ರೆಸ್ ತುಂಗಳ, ಜಿಲ್ಲಾ ಅಧ್ಯಕ್ಷ ಶಬ್ಬೀರ್, ಅಧ್ಯಕ್ಷ ವಿದ್ಯಾರಾಣಿ, ಅಲ್ಪಸಂಖ್ಯಾತ ಘಟಕದ ಜಾಗಿರದಾರ, ಪರಿಶಿಷ್ಟ ಅಧ್ಯಕ್ಷ ರಮೇಶ, ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಗುಬ್ಬೇವಾಡ, ಎನ್‌ಎಯುಐ ಅಧ್ಯಕ್ಷ ಅಮಿತ್, ಘಟಕದ ಅಧ್ಯಕ್ಷ ಚವ್ಹಾಣ, ಎಸ್ ಟಿ ದೇವಾನಂದ ಲಚ್ಯಾಣ, ಎಂ ಬಿ ಮೆಂಡೆಗಾರ, ವಿದ್ಯಾವತಿ ಅಂಕಲಗಿ, ಹನೀಫ್ ಮಕಾಂದಾರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಹಾನಗರ ಪಾಲಿಕೆಯ ಸದಸ್ಯೆ ಆರತಿ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಶಹಾಪೂರ, ಅಪ್ಪು ಕಾಂಗ್ರೆಸ್ ಪ್ರಧಾನ ಜಾಕೀರಹುಸೇನ ಮುಲ್ಲಾ, ಎಂ ಎಂ ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಸೋಮನಾಥ ಕಳ್ಳಿಮನಿ, ಫಿರೀಜ ಶೇಖ, ಪರಸು ಹೊಸಮನಿ, ಕೃಷ್ಣಾ ಲಮಾಣಿ, ಮಂಜುಳಾ ಗಾಯಕವಾಡ, ಹಮೀದಾ ಪಟೇಲ, ಆಸ್ಮಾ ಕಾಲೇಬಾಗ, ಜಯಶ್ರೀ ಭಾರತೆ, ಸರಿತಾ ನಾಯಿಕ, ಗಂಗವ್ವ ಕಣಮುಚನಾಳ, ಕಾಶೀಬಾಯಿ ಹಡಪದ, ಧನರಾಜ, ತಾಜುದ್ದೀನ ಖಲೀಫಾ, ಸವಿತಾ ಧನರಾಜ, ಭಾರತಿ ಹೊಸಮನಿ, ಶಮೀಮಾ ಅಕ್ಕಲಕೋಟ, ಎನ್ ಎ. ಕೊಂಡಗೂಳಿ, ರಾಘವೇಂದ್ರ ಕೌಲಗಿ, ವಿಠಲ ಸಂದಿಮನಿ ಸೇರಿದಂತೆ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.