ವಿಜಯಪುರ | ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ನ್ಯಾ. ವಿಶ್ವನಾಥ ಯಮಕನಮರಡಿ

Date:

Advertisements

ಪರಿಸರದ ವಿರುದ್ದ ನಡೆದುಕೊಂಡರೆ ನಿಸರ್ಗದ ಮುನಿಸಿನಿಂದ ಭೀಕರ ಅತೀವೃಷ್ಟಿ-ಅನಾವೃಷ್ಟಿ ಸಂಭವಿಸುತ್ತದೆ. ಹಾಗಾಗಿ ಎಲ್ಲ ಕಾಲದಲ್ಲಿಯೂ ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ್ ಯಮಕನಮರಡಿ‌ ಹೇಳಿದರು.

ವಿಜಯಪುರ ನಗರದ ಮಹಾತ್ಮ ಗಾಂಧಿ ಭವನದಲ್ಲಿ ಕರ್ನಾಟಕ ಜಲ ಬಿರಾದಾರಿ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಪರಸರಕ್ಕಾಗಿ ನಾವು ಒಕ್ಕೂಟ, ರೋಟರಿ ಕ್ಲಬ್ ಮಾರ್ನುಮೆಂಟ್ ಹೆರಿಟೇಜ್ ವಿಜಯಪುರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಜಲ ದಿನದ ನಿಮಿತ್ಯ ನೀರಿನ ಅಭಾವ ಮತ್ತು ಸದ್ಬಳಕೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಮಹಾ ಪಂಚಭೂತಗಳಾದ ನೀರು, ಭೂಮಿ, ಆಕಾಶ, ಅಗ್ನಿ, ಗಾಳಿ ಇವುಗಳನ್ನು ಸಂರಕ್ಷಿಸಿ ಉಳಿಸಿ ಕಾಪಾಡಿಕೊಂಡು ಬರಬೇಕಾದ ಕರ್ತವ್ಯ ಪ್ರತಿಯೊಬ್ಬ ಪ್ರಜೆಯದ್ದಾಗಿದೆ. ನೀರನ್ನು ಹಿತವಾಗಿ ಮಿತವಾಗಿ ಬಳಸಿ ಮುಂದಿನ ಭವಿಷ್ಯದ ಜನಾಂಗಕ್ಕೂ ನೀರು ಉಳಿಸಬೇಕು. ನೀರು ಭೂಮಿಯ ಮೇಲಿನ ಅಮೂಲ್ಯವಾದ ವಸ್ತು. ಇದು ಪ್ರತಿಯೊಂದು ಜೀವಸಂಕುಲಕ್ಕೂ ಬುನಾದಿಯಾಗಿದೆ” ಎಂದು ಹೇಳಿದರು.

Advertisements

“ಇಂದು ನೀರಿನ ಮಹತ್ವ ಗೊತ್ತಿದ್ದರೂ ಬಹುತೇಕರು ರಕ್ಷಣೆ ಮಾಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಪ್ರತಿಯೊಬ್ಬರೂ ಪರಿಸರ ಪೂರಕವಾಗಿ ಕಾರ್ಯಚಟುವಟಿಕೆಗಳನ್ನು ಮಾಡಿದರೆ ಮಾತ್ರ ಭವಿಷ್ಯದಲ್ಲಿ ನೀರು ಸಿಗಲು ಸಾಧ್ಯ. ಅಲ್ಲದೇ ಪರಿಸರದ ವಿರುದ್ದ ನಡೆದುಕೊಂಡರೆ ನಿಸರ್ಗವೇ ಮುನಿಸಿಕೊಂಡು ಆತೀವೃಷ್ಟಿ ಅನಾವೃಷ್ಟಿಯಂತಹ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಇಂದು ಮನುಷ್ಯ ತನ್ನ ಅತಿಯಾದ ಆಸೆಯಿಂದ ಪರಿಸರ ನಾಶಮಾಡಿ ಪ್ರತಿಯೊಂದು ಜೀವವೈವಿಧ್ಯತೆಗೆ ಕಾರಣವಾಗಿದ್ದಾನೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದು ಜನರಲ್ಲಿ ಅರಿವು ಮೂಡಿಸುವುದು ಈ ಘಳಿಗೆಯ ತುರ್ತು ಅವಶ್ಯವಾಗಿದೆ” ಎಂದರು.

“ನೀರಿಲ್ಲದೆ ಪ್ರತಿ ಜೀವರಾಶಿಗಳು ಬದುಕುಳಿಯಲು ಸಾಧ್ಯವಿಲ್ಲ. ನೀರು ಮಹತ್ವದ್ದಾಗಿದ್ದು, ಇದರ ಸಂರಕ್ಷಣೆಗೆ ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಪ್ರತಿಜ್ಞೆ ಮಾಡಬೇಕು. ಜಲವನ್ನು ಮನಬಂದಂತೆ ಪೋಲು ಮಾಡಿ ಹಾಳು ಮಾಡಬಾರದು. ಮಾನವ ನಿರ್ಮಿತ ಯಾವುದೇ ಅಂಶ ಕೈಕೊಟ್ಟರೆ ರಿಪೇರಿ ಮಾಡಬಹುದು ಆದರೆ ನಿಸರ್ಗವೇ ಹಾಳದರೆ ಮಾನವ ಸೇರಿದಂತೆ ಸಕಲ ಜೀವಿಗಳ ನಾಶಕ್ಕೆ ದಾರಿಯಾಗುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಿ ಜಲ ಸಂರಕ್ಷಿಸಬೇಕು” ಎಂದು ನುಡಿದರು.

ಮುಖ್ಯ ಅತಿಥಿ ಜಲ ಬಿರಾದರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಪೀಠರ್ ಅಲೆಕ್ಸಾಂಡರ್‌ ಮಾತನಾಡಿ, “ವಿಜಯಪುರ ಜಿಲ್ಲೆ ಐದು ನದಿಗಳ ಜಿಲ್ಲೆಯೆಂದು ಹೆಸರುವಾಸಿಯಾಗಿದೆ. ವಿಜಯಪುರ ಆದಿಲ್ ಶಾಹಿ ರಾಜರ ಕಾಲದಲ್ಲಿ ಬಾವನ್ ಸೌ ಬಾವಡಿಗಳು ನೂರಾರು ಕೆರೆಗಳು ಇದ್ದವು. ಆದರೆ ಇಂದು ಇವೆಲ್ಲಾ ನೋಡಲು ಸಿಗುತ್ತಿಲ್ಲ. ಎಷ್ಟೋ ಬಾವಿಗಳು ಕೆರೆಗಳು ಖಾಸಗಿಯವರ ಪಾಲಾಗುತ್ತಿವೆ. ಸರ್ಕಾರ ಇವುಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಮಾಡಬೇಕಾಗಿದೆ. ಆಗ ಮಾತ್ರ ನೀರು ಒದಗಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ವಿಜಯಪುರದ ಇತಿಹಾಸದಲ್ಲಿ ನೀರಿನ ವ್ಯವಸ್ಥೆಯನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ಮಾಡಿದ್ದು ಕಂಡುಬರುತ್ತದೆ. ಆದರೆ ಪ್ರಸ್ತುತ ದಿನ ಮಾನದ ಪರಿಸ್ಥಿತಿ ನೋಡಿದರೆ ನೀರಿನ ಮಹತ್ವ ಅರಿಯದ ಕೆಲವರು ನೀರಿನ ವ್ಯವಸ್ಥೆಯನ್ನು ಹಾಳು ಮಾಡಿದ್ದು ಕಂಡುಬರುತ್ತದೆ. ಇದು ವಿಶಾಲದ ಸಂಗತಿಯಾಗಿದೆ. ಮಕ್ಕಳು, ಯುವಕರು, ಹಿರಿಯರು ನೀರಿನ ಮಹತ್ವ ಅರಿಯಬೇಕು” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜನಹಿತ ವಕೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರೊ. ಮಲ್ಲಿಕಾರ್ಜುನ ಸುಂಗಿಮಠ ಮಾತನಾಡಿ, “ಭೀಮೇ, ಕಾಗಿಣ, ಕೃಷ್ಣ, ಮುಂತಾದ ನದಿಗಳ ನೀರು ಕೆಲವು ಜನರಿಂದ ಕಲುಷಿತವಾಗುತ್ತಿದೆ. ಅದರಿಂದ ಜನಜೀವನದ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತಿರುವುದು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾದರೂ ಸಂಬಂಧಿಸಿದ ಅಧಿಕಾರಿಗಳು ರಾಜಕಾರಣಿಗಳು ಏನು ಮಾಡುತ್ತಿದ್ದಾರೆಂಬ ಪ್ರಶ್ನೆ ಸಮಾಜದಲ್ಲಿ ವ್ಯಕ್ತವಾಗುತ್ತಿದೆ. ಪಂಚಭೂತಗಳನ್ನು ಪೂಜಿಸಿ ಗೌರಿಸುವ ಸಂಸ್ಕಾರ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ಅದು ಜಲ ಸೇರಿದಂತೆ ಎಲ್ಲ ಪಂಚಭೂತಗಳನ್ನು ಉಳಿಸಲು ಬೆಳೆಸಲು ಜಾಗೃತಿಯ ಸಂಕೇತವಾಗಿದೆ. ಆದರೆ ಇಂದು ಫ್ಲ್ಯಾಟ್, ಫ್ಯಾಕ್ಟರಿ ನೆಪದಲ್ಲಿ ಭೂಮಿ ಮತ್ತು ನೀರು ಎರಡನ್ನೂ ನಾಶ ಮಾಡುತ್ತಿರುವ ಮಾನವರು ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ನೀರಿಗಾಗಿ ವಿಶ್ವಾದ್ಯಂತ ಯುದ್ಧ ನಡೆಯುವ ಹಂತ ತಲುಪುವ ಸಾಧ್ಯತೆಗಳು ಗೋಚರವಾಗುತ್ತಿವೆ. ಕಾರಣ ಜಲ ಮತ್ತು ಜಲಮೂಲಗಳನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಮುಂದೆ ಬರಬೇಕು” ಎಂದು ಕರೆಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೀರಿನ ತಜ್ಞರು, ಸಮಾಜ ಚಿಂತಕ ಡಾ.ರಿಯಾಜ್ ಫಾರೂಕಿ ಮಾತನಾಡಿ, “ನೀರಿನ ಮಹತ್ವ ಅರಿತು ಅದನ್ನು ಉಳಿಸಲು ಯೋಚನೆ, ಯೋಜನೆಳನ್ನು ಮಾಡಬೇಕಿದೆ. ಅದಕ್ಕಾಗಿ ತಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಜನತೆ ಮತ್ತು ಹೋರಾಟಗಾರರು ಅದಕ್ಕೆ ಸಹಕರಿಸಬೇಕು” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಗದಗ | ಕೂಲಿಕಾರರ ಜತೆಗೆ ಸಮನ್ವಯತೆ ಸಾಧಿಸಿ ಕೆಲಸ ತಗೆದುಕೊಳ್ಳಿ: ಪಿಡಿಒ ಶಿಲ್ಪಾ ಕವಲೂರ

ಹಿರಿಯ ನ್ಯಾ. ಶೃಂಗಿಮಠ ಮಾತನಾಡಿ, ನೀರಿನ ರಕ್ಷಣೆ ಮತ್ತು ಸದ್ಬಳಕೆಗಾಗಿ ಪ್ರತಿಜ್ಞಾವಚನ ಬೋಧಿಸಿದರು. ಮಕ್ಕಳು, ಯುವಜನರು ಜಲ ಸಂರಕ್ಷಣೆಯ ಪ್ರಮಾಣ ವಚನ ಸ್ವೀಕರಿಸಿದರು.

ಸಂಘಟಕರುಗಳಾದ ಮಹಾಂತೇಶ್ ಕೆರೂಟಿಗೆ, ಪ್ರವೀಣಗೌಡ ಪಾಟೀಲ, ಸತೀಶ್ ಪಡಸಲಗಿ, ರಾಜ ಹಾಗೂ ಬಾಲಶ್ರಮದ ಸಿಬ್ಬಂದಿಗಳಾದ ಎಲ್ಲಪ್ಪ ಇರಕಲ್, ಮಂಜುನಾಥ್ ಸಿಕ್ಕಾಪೋ ಎಂನಿಯರಿಂಗ್ ಕಾಲೇಜಿನಲ್ಲಿ ನೀರು ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳು ಬಾಲಶ್ರಮದ ಮಕ್ಕಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X